ಬ್ರಹ್ಮಾಂಡದ ಯಾವುದೋ ನಕ್ಷತ್ರ ಮಂಡಲದೊಳಗೆ ಮನುಷ್ಯನಿಗಿಂತಲೂ ಮುಂದುವರೆದ ಜೀವರಾಶಿ ಇರಬಹುದೆನ್ನುವ ಬಗ್ಗೆ ಬಹಳಷ್ಟು ಜಿಜ್ಞಾಸೆಯ ಸ್ಪೂರ್ತಿಯಿಂದ ಹುಟ್ಟಿರುವುದು ‘ಆಕಾಶ’. ತಾಂತ್ರಿಕ ಮತ್ತು ಸಾಮಾಜಿಕ - ರಾಜಕೀಯ ಅಂಶಗಳನ್ನು ಒಮ್ಮೊಟ್ಟಿಗೇ ನಿರೂಪಿಸುತ್ತಾ ಅದ್ಭುತ ಪ್ರವಾಸ ಕಥನದಂತೆ ವರ್ತಮಾನ - ಭವಿಷ್ಯಗಳನ್ನು ಕ್ಷಿತಿಜವೊಂದರಲ್ಲಿ ಸೆರೆಹಿಡಿದು ಚಿತ್ರಿಸಿರುವ ವಿಶಿಷ್ಟವಾದ ಒಂದು ಕಾಲ್ಪನಿಕ ಕಾದಂಬರಿ ಇದಾಗಿದೆ.
ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...
READ MORE