ಸಾಮಾಜಿಕ ಹಿನ್ನೆಲೆಯ ಕೌತುಕಮಯ ಕೃತಿ ಆಶಾಕಿರಣ್ ಎಂ ಅವರ ‘ಅಪರಾಧಿ ನಾನಲ್ಲ’. ಓದುಗರ ಊಹೆ, ಕಲ್ಪನೆ ಸುಳ್ಳಾಗುವಂತೆ ವಿಶಿಷ್ಟವಾದ ಹೃದಯ ಸ್ಪಂದನ ಸಾಮಾಜಿಕ ಘಟನೆಗಳೊಂದಿಗೆ ಈ ಕೃತಿಯು ಕತೆಯನ್ನು ಒಳಗೊಂಡಿದ್ದು, ನಿರೂಪಣಾ ಶೈಲಿ, ಪಾತ್ರದಲ್ಲಿನ ವೈವಿದ್ಯತೆ ಮತ್ತು ಘಟನೆಗಳನ್ನು ನಿರೂಪಿಸಿರುವ ರೀತಿ ವಿಭಿನ್ನವಾಗಿದೆ. ಮುಖ್ಯವಾಗಿ ಹಳ್ಳಿಯ ಸೊಗಡಿನ ಚಿತ್ರಣ, ಆಚಾರ-ವಿಚಾರಗಳು, ಸಂಸ್ಕೃತಿ-ಸಂಸ್ಕಾರವನ್ನು ಅಳವಡಿಸಿ ಕೊಂಡಿರುವುದು ಶ್ಲಾಘನೀಯವಾಗಿದೆ, ಪ್ರಕೃತಿಯ ಸೌಂದರ್ಯದ ವರ್ಣನೆ ರಮಣೀಯವಾಗಿದೆ. ಘಟನೆಗಳು ಸಾಗುವ ರೀತಿಯಲ್ಲಿ ವೇಗ ಮತ್ತು ವೈವಿದ್ಯತೆ ಇದೆ. ಕಥೆ, ಕಾದಂಬರಿ ಯಾವುದೇ ಆಗಲಿ ಬದುಕನ್ನು ಹತ್ತಿರದಿಂದ ಕಂಡಾಗ ಮತ್ತು ನಿತ್ಯ ಜೀವನದ ಪ್ರಯೋಗಿಕತೆಯನ್ನು ಅಳವಡಿಸಿಕೊಂಡಾಗ ಕಾದಂಬರಿಗೆ ಮತ್ತಷ್ಟು ಮೌಲ್ಯ ಬರುತ್ತದೆ.
ಆಶಾ ಕಿರಣ್ ಅವರು ಮೂಲತಃ ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಚೌಡೇನಹಳ್ಳಿಯವರು. 1968 ನವೆಂಬರ್ 25 ರಂದು ಜನನ. ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿರುತ್ತದೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ ಕೃತಿಗಳು: ಸುಮುಖ ಕಲಾ ...
READ MORE