ಸ್ವಪ್ನದ ಹೊಳೆ-ಡಾ. ಕೆ. ಶಿವರಾಮ ಕಾರಂತರ ಕಾದಂಬರಿ. ಕಥಾನಾಯಕ ಕಿಟ್ಟಣ್ಣ ಬಾಲ್ಯದಿಂದಲೂ ನಿಸರ್ಗದ ಚೆಲುವಿಗೆ ಮನಸೋತು, ನಿಸರ್ಗದೊಂದಿಗೆ ಬೆರೆತು, ಸೌಂದರ್ಯಗ್ರಹಣ ಶಕ್ತಿಯನ್ನು ಬೆಳೆಸಿಕೊಂಡವನು. ಅವನು ಹುಟ್ಟಿ, ಬೆಳೆದಿದ್ದ ಸೊಪ್ಪಿನಹಳ್ಳಿಯಲ್ಲಿ ಹರಿಯುತ್ತಿದ್ದ ಹಳ್ಳ - ಕಿಟ್ಟಣ್ಣನ ಬಾಯಿಯಲ್ಲಿ ಸ್ವಪ್ನದ ಹೊಳೆ- ಎನಿಸಿ ಕೂಳ್ಳುತ್ತದೆ. ತನ್ನ ಹಳ್ಳಿಯ ಸುತ್ತಮುತ್ತಲಿನ ಗುಡ್ಡ, ಬೆಟ್ಟ, ನದಿ, ಕಾಡು, ಗೋಳಿಮರದ ಕಟ್ಟೆ, ಕೇದಗೆಯ ಹಿಂಡಲು, ಭೂತದ ಕಲ್ಲು ಮೊದಲಾದ ಪ್ರಾಕೃತಿಕ ತಾಣಗಳು ಬದುಕಿನಲ್ಲಿ ಪ್ರಕೃತಿಯ ಮೋಹ ಹುಟ್ಟಿಸುತ್ತವೆ. ಮುಂದೆ, ಅವನು ಕಾಲೇಜು ಕಲಿಯುತ್ತಿದ್ದಾಗ, ವಕೀಲರೊಬ್ಬರ ಮನೆಯಲ್ಲಿ ವಾಸಿಸುತ್ತಾನೆ. ಆ ವಕೀಲರು ತುಂಬ ಶ್ರೀಮಂತರಾಗಿದ್ದರು. ಅವರ ಮಗಳು ಲಲಿತ ತಾನಾಗಿಯೇ ಕಿಟ್ಟಣ್ಣನನ್ನು ಪ್ರೇಮಿಸುತ್ತಾಳೆ. ಅಂತಹ ಶ್ರೀಮಂತರ ಮಗಳನ್ನು ಲಗ್ನವಾಗುವ ಧೈರ್ಯ ಕಿಟ್ಟಣ್ಣನಿಗಿರುವುದಿಲ್ಲ, ಆದರೂ, ಲಲಿತೆ ಅವನನ್ನು ತನ್ನ ಮೋಹಪಾಶಕ್ಕೆ ಸಿಲುಕಿಸುತ್ತಾಳೆ, ಮುಂದೆ, ಅವನನ್ನು ಸಂಪೂರ್ಣ ಮರೆತು ಹಿರಿಯರು ನಿಶ್ಚಯಿಸಿದ್ದ ವರನನ್ನು ಸಂತೋಷದಿಂದಲೇ ವರಿಸುತ್ತಾಳೆ, ಇದರಿಂದ, ಕಿಟ್ಟಣ್ಣನಿಗೆ ಆಘಾತವಾಗುತ್ತದೆ. ಮುಂದೆ, ಅವನ ಬದುಕಿನಲ್ಲಾಗುವ ಪರಿಣಾಮವೇ ಈ ಕಾದಂಬರಿ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1966ರಲ್ಲಿ (ಪುಟ: 334) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE