‘ಶನೀಶ್ವರನ ನೆರಳಲ್ಲಿ’ ಚಿಂತಕ ಡಾ. ಶಿವರಾಮ ಕಾರಂತರ ಕಾದಂಬರಿ ಇದು. ವನಜೀವನದ ಕತೆ, ಕಾನನದ ದಟ್ಟಣೆಯಲ್ಲಿ ಬೆಳೆಯುವ ಮರಗಳಲ್ಲಿ ಸ್ಪರ್ಧೆ ಇರುವಂತೆ, ವನ್ಯಜೀವಿಗಳ ನಡುವೆ ಸ್ಪರ್ಧೆ ಇರುವಂತೆ, ದಟ್ಟವಾದ ಕಾಡಿನ ತಪ್ಪಲಿನಲ್ಲಿರುವ ನೂರೊಕ್ಕಲು ಗ್ರಾಮದಲ್ಲಿ ವಾಸಿಸುತ್ತಿದ್ದ ಜನಗಳ ಬದುಕಿನ ಹೋರಾಟದ ಕತೆ. ನಾಗರಿಕತೆಯ ಸೋಂಕಿಲ್ಲದ, ಕಾಡಿನ ಕೊಂಪೆಯೊಂದರ ಹಳ್ಳಿಯ ಬದುಕಿನ ಮುಖ್ಯ ಸಮಸ್ಯೆಯಾದ ಅನ್ನಕ್ಕೆ ಸಂಬಂಧಿಸಿದ ಹಾಗೂ ಆಸ್ತಿಯ ಕಲಹವೇ ಪ್ರಧಾನ ವಸ್ತುವಾಗಿದ್ದು,ಈ ಕಾದಂಬರಿಯು ಕಲಹದ ನಾನಾ ಮುಖಗಳ ಪರಿಚಯವನ್ನು ಮಾಡಿಕೊಡುತ್ತದೆ.
ಶನಿಶ್ವರರರು ಗ್ರಾಮದೇವತೆ. ಕಾದಂಬರಿ ನಿರೂಪಕರು ಕಥೆ ಹೇಳುತ್ತಾ ಹೋಗುತ್ತಾರೆ. ದೇವಾಲಯದ ವಾಸ್ತು ಚೆನ್ನಾಗಿ ಎಂದು ಕೇಳಿ ತಿಳಿದಿದ್ದ ಅವರು ಅಲ್ಲಿಗೆ ಭೇಟಿ ನೀಡಿ, ದೇವಸ್ಥಾನದ ಪೂಜಾರಿಯಾಗಿದ್ದ ಕಾವೇರಮ್ಮಳನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಅವಳೊಂದಿಗೆ ಪಾಟಾಳಿ ಶಿವಣ್ಣ , ಶಂಕರ ಜೋಯಿಸರು ಹೀಗೆ ಮೊದಲಾದವರು ಪರಿಚಯವಾಗುತ್ತಾರೆ. ಅವರ ಕುಟುಂಬದ ಕಲಹಗಳು ತಿಳಿಯುತ್ತವೆ. ಒಂದು ದಿನ ಆ ಮುದುಕಿ ಕಾವೇರಮ್ಮ ಸಾಯುತ್ತಾಳೆ. ಇತರರ ಕೌಟುಂಬಿಕ ಕಲಹಗಳ ದುರ್ಲಾಭ ಪಡೆಯಲು ದೇವಸ್ಥಾನದ ಪೂಜೆ ಇತ್ಯಾದಿ ನಾಟಕವಾಡುತ್ತಿರುವ ಈ ಜನಗಳ ಸಂಚು ಬಯಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾವೇರಮ್ಮನ ಔದಾರ್ಯ, ಪಾಟಾಳಿ ಶಿವಣ್ಣನ ಉದಾರತನ, ಪರಮೇಶ್ವರ ಅಡಿ ಅವರ ಯಕ್ಷಗಾನ ಪ್ರೀತಿಯನ್ನೂ ತೆರೆದು ತೋರುತ್ತಾರೆ. ಶನೀಶ್ವರನಿಗೆ ಪೂಜೆ ಮಾಡಿದರೂ ಸಮಸ್ಯೆಗಳು ತಪ್ಪುವುದಿಲ್ಲ. ಬಹುತೇಕ ಸಮಸ್ಯೆಗಳಿಗೆ ನಾವೇ ಕಾರಣ ಎಂಬುದರ ಚಿತ್ರಣವನ್ನು ನೀಡುತ್ತದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1960ರಲ್ಲಿ (ಪುಟ: 281) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE