ಅರ್ಧದಾರಿ ವೈಶಾಲಿಯ ನಡಿಗೆ. ಅದನ್ನು ವೈಶಾಲಿಯ ಒಳಗೆ ಇಳಿದು ಕಂಡವರು ಸತ್ಯಕಾಮರು. ಬದುಕು ವಿಶಾಲವಾದರೆ ಎಷ್ಟು ನಿರ್ಭೀತ, ಸ್ವತಂತ್ರ ಎನ್ನುವುದಕ್ಕೆ ವೈಶಾಲಿಯ ಬದುಕು ಸಾಕ್ಷಿ. ಇಲ್ಲಿ ವೈಶಾಲಿ ಕೇವಲ ಹೆಣ್ಣಲ್ಲ; ಗಂಡೂ ಅಲ್ಲ. ಅವಳಿಗೆ ಯಾವುದರ ಭಯವೂ ಇಲ್ಲ.
ನಿರ್ಭೀತಿ ಎಂದರೆ ಭಯದ ಮೂಲ ತಿಳಿಯುವುದು. ಭಯ ಇಲ್ಲವಾಗುವುದಲ್ಲ. ಸ್ವಾತಂತ್ರ ಎಂದರೆ ಮುಕ್ತವಾಗುವುದಲ್ಲ. ಪರಮ ಬಂಧನಕ್ಕೆ ಅರ್ಪಿಸಿಕೊಳ್ಳುವುದು. ಸರ್ವಾರ್ಪಣೆ ವೈಶಾಲಿಯ ಶಕ್ತಿ. ಆದರೂ ಇದಕ್ಕಿಂತ ದಾರಿ ಮುಂದೆ ಇದೆ. ಆದ್ದರಿಂದಲೇ ಸತ್ಯಕಾಮರ ಕಣ್ಣಿಗೆ ವೈಶಾಲಿಯದು ಇನ್ನೂ ಅರ್ಧ ದಾರಿ...
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE