ಸಾಹಿತಿ ಡಾ. ಬಿ. ಜನಾರ್ದನ ಭಟ್ ಅವರ ಮಿನಿ ಕಾದಂಬರಿ ’ಕಲ್ಲುಕಂಬವೇರಿದ ಹುಂಬ’.
ಇದೊಂದು ಸಾಮಾಜಿಕ ಕಾದಂಬರಿಯಾಗಿದ್ದು, ಪತ್ತೇದಾರಿ ಕಥಾನಕವನ್ನು ಚಿತ್ರಿಸುತ್ತದೆ.
ಈ ಕಾದಂಬರಿಯ ಆವರಣವು ತುಳುನಾಡು ಎನ್ನಲಾಗುವ ದಕ್ಷಿಣ ಕನ್ನಡ ಜಿಲ್ಲೆಯ ದೈವಾರಾಧನೆ, ಜಾನಪದ ಜೀವನ, ನಂಬಿಕೆ, ಆಚಾರ ವಿಚಾರ, ಅವುಗಳ ಕುರಿತ ವಿವರಣೆ, ವಿಶ್ಲೇಷಣೆಗಳಿಂದ ಪ್ರೇರಿತವಾಗಿದೆ. ತುಳುನಾಡಿನ ಜನರ ನಂಬಿಕೆ, ಆರಾಧನಾ ಪರಂಪರೆ, ಪುರಾಣ, ಐತಿಹ್ಯ, ಇತಿಹಾಸಗಳನ್ನೆಲ್ಲ ವಿವರವಾಗಿ ಕಲಾತ್ಮಕವಾಗಿ ಶೋಧಕ ದೃಷ್ಟಿಯಿಂದ ನೋಡುವ, ದಾಖಲಿಸುವ ಭಿನ್ನ ಬಗೆಯ ಕಾದಂಬರಿಯಾಗಿ ಈ ಕೃತಿ ಹೊರಬಂದಿದೆ.
ಜನಸಾಮಾನ್ಯರ ನಂಬಿಕೆ, ಆಚಾರ, ವಿಚಾರಗಳು ಸಾಮಾಜಿಕ ಪರಿಸರದ ಅಗತ್ಯವನ್ನು ಅವಲಂಬಿಸಿ ಬೆಳೆದು ಬಂದ ಬಗೆ, ಮತ್ತು ಸಂಶೋಧನೆಯ ಹೆಸರಿನಲ್ಲಿ ಅವುಗಳ ಮೂಲಭೂತವನ್ನು ಶೋಧಿಸುವುದರಿಂದ ಸಮಾಜದ ಸ್ವಾಸ್ಥಕ್ಕೆ ಧಕ್ಕೆ ತಗಲಬಹುದು ಎಂಬ ಸಂದೇಶವೂ ಇಲ್ಲಿ ಬಿಂಬಿತವಾಗಿದೆ.
’ಕಲ್ಲು ಕಂಬವೇರಿದ ಹುಂಬ’ ಒಂದು ಚಿಂತನಪ್ರಧಾನ ಮತ್ತು ವಾಸ್ತವಮಾರ್ಗದ ಕಾದಂಬರಿ ಎಂದು ಹೇಳಬಹುದು. ದಕ್ಷಿಣ ಕನ್ನಡ ಜಿಲ್ಲೆಯ ತುಳುನಾಡಿನ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಜೀವನದ ಸೂಕ್ಷ್ಮತೆಗಳನ್ನು ಇಲ್ಲಿ ಚಿತ್ರಿಸಲಾಗಿದೆ.
ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...
READ MORE