‘ಕಾರಣಪುರುಷ’ ಹಿರಿಯ ಲೇಖಕ ರಂ.ಶ್ರೀ.ಮುಗಳಿ ಅವರ ಸಾಮಾಜಿಕ ಕಾದಂಬರಿ. ಇಂಟರ್ ಮೀಡಿಯಟ್ ಕ್ಲಾಸಿನ ಕಲೆ ಹಾಗೂ ವಿಜ್ಞಾನ ಶಾಖೆಯ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ರಚಿಸಿದ ಕೃತಿ ಎನ್ನುತ್ತಾರೆ ಲೇಖಕ ರಂ.ಶ್ರೀ. ಮುಗಳಿ.
ದೇಸಿ ಉತ್ತರ ಕರ್ನಾಟಕದಲ್ಲಿ ರೂಢವಾದುದೆಂಬ ಕಾರಣದಿಂದ ಇದನ್ನೊದಿದ ಮೈಸೂರಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಉತ್ಕೃಷ್ಠತೆಯ ಬಗ್ಗೆ ತಿಳಿಯಲು ಅನುಕೂಲವಾಗಿದೆ. ಇದರಿಂದ ಅಖಂಡ ಕರ್ನಾಟಕ ದೃಷ್ಟಿ ಉದಯವಾಗಲು ಸಹಾಯವಾಗುತ್ತದೆ. ಅದರಂತೆ ಅಭ್ಯಾಸಿಗಳ ಸೌಕರ್ಯಕ್ಕಾಗಿ ಈ ಆವೃತ್ತಿಯ ಕೊನೆಯಲ್ಲಿ ಈ ಕಾದಂಬರಿಯ ವಿಶಿಷ್ಟ ಪ್ರಯೋಗಗಳು ಹಾಗೂ ಅದಕ್ಕೆ ಸಮಾನವಾದ ಮೈಸೂರು ವ್ಯಾಪ್ತಿಯ ಮಾತುಗಳ ಪ್ರಯೋಗಗಳು ಅಲ್ಲವೆ ವಿವರಣೆಗಳನ್ನು ಕ್ರಮಬದ್ಧವಾಗಿ ನೀಡಲಾಗಿದೆ. ವಿದ್ಯಾರ್ಥಿಗಳಿಗಾಗಿ ಬರೆದ ಕೃತಿಯಾಗಿದೆ.
ಕನ್ನಡ ಸಾಹಿತ್ಯ ಚರಿತ್ರೆಯ ಮೂಲಕ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾದ ರಂಗನಾಥ ಶ್ರೀನಿವಾಸ ಮುಗಳಿ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. 1906ರ ಜುಲೈ 15ರಂದು ಜನಿಸಿದರು. ತಂದೆ ಶ್ರೀನಿವಾಸರಾವ್ ಮತ್ತು ತಾಯಿ ಕಮಲಕ್ಕ. ಬಾಗಲಕೋಟೆ, ಬಿಜಾಪುರಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. (1928) ಎಂ.ಎ. (1930) ಮಾಡಿದರು. 1932ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಿಕ್ಷಕರಾಗಿ ಸೇರಿದರು. 1933ರಲ್ಲಿ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ 1966ರಲ್ಲಿ ನಿವೃತ್ತರಾದರು. ಕೆಲವು ಕಾಲ ಸರಕಾರದ ಸಾಹಿತ್ಯ ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ...
READ MORE