‘ದೇವ್ರು’ ಕೃತಿಯು ಪದ್ಮನಾಭ ಭಟ್ ಶೇವ್ಕಾರ ಅವರ ಕಾದಂಬರಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ವಿವೇಕ ಶಾನಭಾಗ ಅವರು, ವಲಸೆಯಿಂದ ಹುಟ್ಟುವ ಘರ್ಷಣೆ ಮತ್ತು ಅನುಸಂಧಾನ ಮನುಷ್ಯ ಚರಿತ್ರೆಯ ಒಡಲಲ್ಲಿದೆ. ನೆಲೆ ಹುಡುಕುತ್ತ ಹೊರಟವರ ಚಲನಶೀಲತೆಯು ಇಂದು ಧರ್ಮ ದೇಶ, ಭಾಷೆ, ವರ್ಣ ಇತ್ಯಾದಿಗಳ ನೆಪದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಇಂಥ ಮುಖ್ಯ ಸಮಸ್ಯೆಯೊಂದರ ಬಹುಮುಖಗಳನ್ನು ಅದರೆಲ್ಲ ಸಂಕೀರ್ಣತೆಯೊಡನೆ ಹಿಡಿಯುವ ಮಹತ್ವಾಕಾಂಕ್ಷೆ ಕಾರ್ಯವನ್ನು ಈ ಕಾದಂಬರಿ ಮಾಡಿದೆ. ಸಹ್ಯಾದ್ರಿ ತಪ್ಪಲಿನ ಹಳ್ಳಿಯೊಂದರ ಜೀವನವನ್ನು ಅದರ ಸೌಂದರ್ಯ, ಕ್ರೌರ್ಯ ಮತ್ತು ಕಟುವಾಸ್ತವತೆಯ ಹಿನ್ನೆಲೆಯಲ್ಲಿ ಶೋಧಿಸುತ್ತಲೇ ನಗರದ ಸಹವಾಸಗಳನ್ನು ಈ ಕತನವು ಎದುರಿಗಿಡುತ್ತದೆ. ಆಧುನಿಕ ತಂತ್ರಜ್ಞಾನವು ನಮ್ಮೊಳಗೆ ಹುಟ್ಟಿಸಿರುವ ಹುಸಿ ತಿಳುವಳಿಕೆಯ ಅಹಂಕಾರದ ಬುಗ್ಗೆಯನ್ನು ಒಡೆಯುತ್ತ, ಮನುಷ್ಯ ಪ್ರಕೃತಿಯ ಸಂಬಂಧದ ಜಟಿಲತೆಯನ್ನು ಅರಿಯಲು ಅಗತ್ಯವಿರುವ ತಾಳ್ಮೆ, ಸಂಯಮ,ವಿನಯಗಳ ಮಹತ್ವವನ್ನು ಇಲ್ಲಿರುವ ಕತನಕಗಳು ಮನಗಾಣಿಸುತ್ತದೆ ಎಂದಿದ್ದಾರೆ
ಪತ್ರಕರ್ತ, ಬರಹಗಾರ ಪದ್ಮನಾಭ ಭಟ್ ಅವರು ಜನಿಸಿದ್ದು 1990 ಜೂನ್ 27ರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶೇವ್ಕಾರ ಗ್ರಾಮದಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಜಾವಾಣಿಯಲ್ಲಿ ವರದಿಗಾರ ಹಾಗೂ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಸುಧಾ ವಾರಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ವಯಾಕಾಂ (vayacom) ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿನಿಮಾ, ರಂಗಭೂಮಿ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇರುವ ಇವರ ಚೊಚ್ಚಲ ಕೃತಿ ಕೇಪಿನ ಡಬ್ಬಿ. ಈ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ...
READ MORE