ಕಾದಂಬರಿಕಾರ ಡಾ. ಬಿ.ಎಲ್. ವೇಣು ಅವರ ಐತಿಹಾಸಿಕ ಕಾದಂಬರಿ -ಹೆಬ್ಬುಲಿ ಹಿರೇಮದಕರಿ ನಾಯಕ. ಚಿತ್ರದುರ್ಗದ ಪಾಳೇಗಾರರು ಶೌರ್ಯಗಳಿಗೆ ಪ್ರಸಿದ್ಧರು. ದಾವಣಗೆರೆ ಹಾಗೂ ಚಿತ್ರದುರ್ಗದ ಭಾಗದ ಈ ಪಾಳೇಗಾರರ ಪೈಕಿ ಹಿರೇಮದಕರಿನಾಯಕ ಕೂಡ ಒಬ್ಬರು. ಇವರು 1721-48ರ ತನಕ ಆಳ್ವಿಕೆ ನಡೆಸಿದ್ದರು. ದಾವಣಗೆರೆ ಪಾಳೇಗಾರರ ಆಳ್ವಿಕೆಯ ಕೇಂದ್ರವಾಗಿತ್ತು. ದಾವಣಗೆರೆ, ಉಚ್ಚಂಗಿದುರ್ಗ, ಮಾಯಕೊಂಡದ ಕೋಟೆಗಳನ್ನು ಕಟ್ಟಿ ಪಾಳೇಗಾರರು ಆಡಳಿತ ನಡೆಸುತ್ತಿದ್ದರು. ಹಿರೇಮದಕರಿನಾಯಕ ರಣರಂಗದಲ್ಲೇ ವೀರಮರಣನಪ್ಪಿದ್ದ ಸ್ಥಳದಲ್ಲೇ ಅಂದರೆ ಮಾಯಕೊಂಡ ಗ್ರಾಮದಲ್ಲಿ ಸಮಾಧಿ ಮಾಡಲಾಗಿದೆ.
ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...
READ MORE