ಸಾಹಿತಿ ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್) ಅವರು ಬರೆದ ಕಾಂದಂಬರಿಗಳ ಸಂಗ್ರಹ ಕೃತಿ. ಇಲ್ಲಿ ಮೂರು ಕಾದಂಬರಿಗಳನ್ನು (ಕೊಳಲಿನ ಕರೆ, ದೊರೆ ಮಗಳು ಹಾಗೂ ನನ್ನ ಅತ್ತಿಗೆ) ಸಂಕಲಿಸಲಾಗಿದೆ. ಈ ಮೂರು ಕಾದಂಬರಿಗಳು ಸಾಮಾಜಿಕ ವಿದ್ಯಮಾನಗಳನ್ನು ವಿಷಯ ವಸ್ತುವನ್ನಾಗಿಸಿಕೊಂಡಿದ್ದು, ಆಕರ್ಷಕ ನಿರೂಪಣೆ ಶೈಲಿಯಂದಿಗೆ ಓದುಗರ ಗಮನ ಸೆಳೆಯುತ್ತವೆ.
ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು. ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...
READ MORE