ಭಾಲ್ಕಿಯ ಹಿರೇಮಠ ಸಂಸ್ಥಾನದ ಪಟ್ಟಾಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಅಧಿಕಾರ ವಹಿಸಿಕೊಂಡು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಕಟಗೊಂಡ ಕೃತಿ -ಮಹಾಪ್ರಸಾದಿ ಕಕ್ಕಯ್ಯ. ಲೇಖಕರು ಭಾಲಚಂದ್ರ ಜಯಶೆಟ್ಟಿ.
ಮಹಾಪ್ರಸಾದಿ ಕಕ್ಕಯ್ಯನವರ ಕುರಿತು ಐತಿಹಾಸಿಕವಾಗಿ ಸುಳಿವುಗಳು ಕಡಿಮೆ. ಪುರಾವೆಗಳನ್ನು ಸಂಗ್ರಹಿಸಿ ಅವರ ಜೀವನಚಿತ್ರವನ್ನು ಕಾದಂಬರಿ ಸ್ವರೂಪದಲ್ಲಿ ಲೇಖಕರು ನೀಡಿದ್ದಾರೆ. ಶ್ರಮಮೂಲದಲ್ಲಿ ಬದುಕು ಕಟ್ಟಿಕೊಂಡಿದ್ದ ಕಕ್ಕಯ್ಯನವರಂತಹ ಶರಣರಿಗೆ ನೈತಿಕ ಬಲವೇ ಜೀವನಾಧಾರ. ಬಸವಣ್ಣನವರ ಜಾತಿ ವಿರೋಧಿ ವೈಚಾರಿಕ ಚಳವಳಿಗೆ ಕಕ್ಕಯ್ಯನವರ ಕೊಡುಗೆಯೂ ಅಪಾರ. ಈ ಕಾದಂಬರಿಯು ಕಕ್ಕಯ್ಯ ಶರಣರ ಜಾತಿ ವಿರೋಧಿ ಹೋರಾಟ, ಜೀವನ ಸಾಹಸ, ವೈಚಾರಿಕ ಪ್ರಖರತೆ ಎಲ್ಲವನ್ನೂ ಕಟ್ಟಿಕೊಡುತ್ತದೆ.
ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು. ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...
READ MORE