ಲೇಖಕ ಭಿ.ಪ. ಕಾಳೆ ಅವರು ಬರೆದ ಐತಿಹಾಸಿಕ ಕಾದಂಬರಿ-ಹಂಸಾ. ಕೈ.ವಾ. ನಾಥ ಮಾಧವರ್ ಎಂಬ ಮರಾಠಿ ಲೇಖಕರ ಕಾದಂಬರಿಯನ್ನು ಆಧರಿಸಿ ಬರೆದಿದೆ. ಔರಂಗಜೇಬನ ಅಂತ್ಯಕಾಲವನ್ನು ಅತ್ಯಂತ ವಿವರವಾಗಿ ಚಿತ್ರಿಸಿದ ಕಾದಂಬರಿ, ಔರಂಗಜೇಬನು ಕ್ರೂರಿಯಾಗಿದ್ದರೂ ಆತನ ಸ್ವಧರ್ಮ ನಿಷ್ಠೆ, ದಾನಧರ್ಮದ ಗುಣ, ವಿಲಾಸ-ವಿರಾಗತೆ ಇವೆಲ್ಲ ಅಂಶಗಳು ಕಾದಂಬರಿಯ ಓದಿನ ಕುತೂಹಲಕ್ಕೆ ಕಾರಣವಾಗುತ್ತಿವೆ. ಈ ಕಾದಂಬರಿಯೊಳಗಿನ ಪ್ರಧಾನ ಪಾತ್ರ ಹಂಸೆ. ಈಕೆಯ ಭವಿಷ್ಯ ನಿಜವಾಗಿ, ಮರಾಠ ರಾಜ್ಯದ ಅವನತಿಯೂ ಆಯಿತು ಎಂಬುದನ್ನು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
ಭಿಕಾಜಿಪಂತ ಕಾಳೆ ಎಂಬುದು ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ. ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...
READ MORE