"ಯಾವ ಕಾಣಿಕೆ ನೀಡಲಿ ನಿನಗೆ" ಪ್ರಸನ್ನ .ವಿ ಚೆಕ್ಕೆಮನೆ ಅವರ ಕಾದಂಬರಿಯ ಶೀರ್ಷಿಕೆಯಲ್ಲಿಯೇ ಒಂದು ವಿಶಿಷ್ಟ ಆಕರ್ಷಣೆಯಿದೆ. ಸು.ರಂ.ಎಕ್ಕುಂಡಿಯವರ ಸೊಗಸಾದ ಭಾವಗೀತೆಯನ್ನು ಬಳಸಿಕೊಂಡು ಬರೆದ ಅನುಪಮ ಪ್ರೇಮ ಕಾವ್ಯ ಈ ಕಾದಂಬರಿ. ಕಥಾನಾಯಕಿ ಗಾಯತ್ರಿಯ ಚಾಕೊಲೇಟ್ ಪ್ರೀತಿ ಯಾವ ರೀತಿಯಲ್ಲಿ ಕಥಾನಾಯಕ ಕೌಶಿಕ್ ನನ್ನು ಪರಿಚಯ ಮಾಡಿಸಿತು. ಇದರಿಂದ ಮುಂದೇನಾಯಿತು. ಗೆಳತಿ ರಮ್ಯಾಳ ಬಾಸ್ ಸಿದ್ಧಾರ್ಥನಿಗೂ, ಕೌಶಿಕ್ ಗೂ ನಡುವೆ ಇರುವ ಸಂಬಂಧವೇನು ? ಆರಂಭದಲ್ಲಿ ಕೌಶಿಕ್ ನನ್ನು ಮನದೊಳಗೆ ಪ್ರೀತಿಸಿದ ಗಾಯತ್ರಿ ಅವನನ್ನು ನಿರಾಕರಿಸಲು ಕಾರಣವೇನು ? ಈ ಎಲ್ಲಾ ಘಟನೆಗಳನ್ನು ಆಧರಿಸಿ ನವಿರಾದ ಹಾಸ್ಯ ಬೆರೆಸಿ ಮಧುರ ಪ್ರೇಮ ಕಥೆಯೊಂದನ್ನು ಓದುಗರಿಗಾಗಿ ನೀಡಿದ್ದಾರೆ.
ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ...
READ MORE