‘ಹಿಮಗಿರಿಯ ಗೌರಿ’ ಕೃಷ್ಣಮೂರ್ತಿ ಪುರಾಣಿಕ ಅವರ ಕಾದಂಬರಿ. ಹಿಮಗಿರಿಯ ಗೌರಿ ಕನ್ನಡನಾಡಿನ ಜನಪ್ರಿಯ ವಾರಪತ್ರಿಕೆಯಾದ ಜನಪ್ರಗತಿಯಲ್ಲಿ 11-08-1963 ರಿಂದ 29-12-1963ರವರೆಗೆ ಧಾರಾವಾಹಿಯಾಗಿ ಪ್ರಕಟವಾಗಿದೆ. ಈ ಕಾದಂಬರಿಯಲ್ಲಿ ಎದ್ದು ಕಾಣುವ ಪಾತ್ರಗಳು ತಾತ್ಕಾಲಿಕ ನಿತ್ಯ ಜೀವನದಿಂದ ಮೂಡಿಬಂದ ಸತ್ಯಚಿತ್ರಗಳಾಗಿರುವುದು ನಿಜವಾಗಿದ್ದರೂ ಅವು ಯಾವುದೇ ಒಂದು ವ್ಯಕ್ತಿಯನ್ನು ಕುರಿತು ಬರೆದವುಗಳಲ್ಲ. ಇಂದಿನ ವಾತಾವರಣ ಅವುಗಳಿಗೆ ಜೀವ ಕೊಟ್ಟಿದೆ. ಕವಿಯು ಕಾಲದ ಕೂಸಾಗಿರುವುದು ನಿಜವಾದರೂ ಅವನು ಕಾಲಾತೀತನೂ ಅಹುದು. ಅವನದು ದಾರ್ಶನಿಕ ದೃಷ್ಟಿ. ಈ ದೃಷ್ಟಿಯಲ್ಲಿ ಕೊಂಕು ಕೊಸರುಗಳಿಲ್ಲ, ಸಂಕುಚಿತ ಭಾವನೆಗೆ ಆಸ್ಪದವಿಲ್ಲ. ಸಾಹಿತಿಯು ಔದಾರ್ಯ ಯಾವಾಗಲೂ ವಿಶುದ್ಧ ಗಂಗಾಜಲವೇ ಆಗಿರುತ್ತದೆ. ಅವನ ಬದುಕು ನಾಡಿಗಾಗಿ ಮೀಸಲು, ಒಂದು ವ್ಯಕ್ತಿಗಾಗಿ ಅಲ್ಲವೆಂಬುದು ನಿತ್ಯ ಸತ್ಯ. ಈ ಕಾದಂಬರಿಯಲ್ಲಿ ಕವಿಯು ಕಂಡ ದರ್ಶನ ಒಂದು ಸೃಷ್ಟಿಯನ್ನು ಕಲ್ಪಿಸಿದೆ.
ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು ಬೆಳ್ಳೆತೆರೆ ಕಂಡಿವೆ. 'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...
READ MORE