‘ಪುರಾಣ ಕನ್ಯೆ’ ಕೃತಿಯು ಕಾ. ತ ಚಿಕ್ಕಣ್ಣ ಅವರ ನೀನು ನಿಜ: ಕತೆ ಕನಸು ಕಲ್ಪನೆ ಮತ್ತು ವಾಸ್ತವ ಪರಿಸರ ಕುರಿತ ಕಾದಂಬರಿಯಾಗಿದೆ. ಇಲ್ಲಿ ಕಟ್ಟೆಕೊಪ್ಪಲಿನ ಕಥನ ಲೋಕವನ್ನು ಅನಾವರಣ ಮಾಡುವ ಲೇಖಕರು ಸಾಂಸ್ಕೃತಿಕ ಲೋಖದ ಜೊತೆಗೆ ಸ್ಥಳೀಯ ಭಾಷೆಯನ್ನು ಕಟ್ಟಿಕೊಡುತ್ತಾ ಜನರ ದೈವವೊಂದರ ಕಲ್ಪನೆಯು ಇನ್ನಷ್ಟು ಸ್ಫುಟಗೊಳ್ಳುವಂತೆ ಮಾಡುತ್ತದೆ. ಓದುಗರಿಗೆ ಇಲ್ಲಿನ ಯಾವ ಪಾತ್ರವೂ ಅನಗತ್ಯವೆಂದು ಎನಿಸುವುದಿಲ್ಲ. ಪ್ರೊ. ಸಂಜೀವಯ್ಯ, ನೀಲವೇಣಿ, ಕುರಿಮಯ್ಯ, ಆನಂದ, ಮುದ್ದಿಗೊರವಯ್ಯ, ಕಣಲಗಮ್ಮ, ಪೂಜಾರಪ್ಪ, ರಂಗಸ್ವಾಮಿ, ದಾಸಯ್ಯ ಮೊದಲಾದ ಪಾತ್ರಗಳು ಕಾದಂಬರಿಯ ಕೇಂದ್ರ ಉದ್ದೇಶಕ್ಕಾಗಿ ಮಾತ್ರ ದುಡಿಯುತ್ತವೆ. ಹೀಗೆ ಬಗೆ ಬಗೆಯ ಕತೆಗಳು ಮೈ ಚೆಲ್ಲಿಕೊಂಡು ಬೆಳೆಯುವ ಈ ಕಾದಂಬರಿಯು ಕೊನೆಯಾಗುವಾಗ- ‘ಅತಿಕುಪ್ಪೆ, ಅಳಿದು ಹೋದ ಈಚಲುವನ, ಆ ತೋಪು, ಹರಿಯೊ ಆ ಯೋಗವತಿ ತೊರೆ, ತೊರೆಯ ದಂಡೆ ಬದಿ ಬೆಳೆದು ತೂಗಾಡೊ ಮರಗಿಡ ಪೊದೆಗಳ ಸೊಂಪಾದ ಸಾಲು, ಮಾಸಿಹೋದ ಮಾಳವ್ವನ ಗುಡಿ, ಅದರ ಸುತ್ತಲಿನ ಆ ಕುರುಚಲು ಗಿಡಗಂಟಿಗಳು, ದ್ವಾಪರ ಯುಗ ನೆನಪಿಸೊ ಪಾಳುಬಿದ್ಧ ಆ ಪಾಂಡವರ ಗುಡಿ, ಗುಡಿಬಳಿಯ ಸರ್ಪಗಳ ಕಾಳಗ, ಬೆಟ್ಟಳ್ಳಿ ಬೆಟ್ಟ, ಕಾಳವ್ವ’ ಇತ್ಯಾದಿಗಳೆಲ್ಲ ಮನಸಿನೊಳಗೆ ಉಳಿದು ಬಿಡುತ್ತವೆ. ಈ ಅರ್ಥದಲ್ಲಿ ಕಾದಂಬರಿಯು ಉಂಟು ಮಾಡುವ ಪರಿಣಾಮ ಅಸಾಧಾರಣವಾದುದು.
ಕತೆಗಾರ-ಕಾದಂಬರಿಕಾರ ಕಾ.ತ. ಚಿಕ್ಕಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಕಾಳಮ್ಮನವರ ಕೊಪ್ಪಲು ಗ್ರಾಮದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಚಿಕ್ಕಣ್ಣ ಅವರು ಸಂತಕವಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಂಚಾಲಕರು. ನಾಲ್ಕು ಕಥಾಸಂಕಲನ, ಮೂರು ಕಾದಂಬರಿ ರಚಿಸಿದ್ದಾರೆ, ’ಮುಂಜಾವು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ’ವಧೂಟಿ’ ನಾಟಕಕ್ಕೆ ಆರ್ಯಭಟ ಪ್ರಶಸ್ತಿ ಲಭಿಸಿದೆ. ಹಲವು ಸಮಿತಿಗಳ ಸದಸ್ಯ ಕಾರ್ಯದರ್ಶಿ, ಸಂಚಾಲಕರಾಗಿ ಕಾರ್ಯನಿರ್ವಹಿಸಿರುವ ಅವರು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಬಿಳಲು ಬಿಟ್ಟ ಬದುಕು, ಒಡಲುರಿ, ವಾಸನಾಮಯ ಬದುಕಿನ ಆಚೆ ಈಚೆ, ಮನಸ್ಸು ...
READ MORE