ಈ ಕಾದಂಬರಿಯು ಬಡ ಮಧ್ಯಮ ವರ್ಗದ ಜನರ ಬದುಕು ಬವಣೆಯನ್ನು ಸುಂದರವಾಗಿ ಸೆರೆಹಿಡಿದಿಯುತ್ತದೆ. " ಇಂದಿರ, ವಾರಿಧಿ ಅಕ್ಕ ತಂಗಿಯರು ಒಂದೇ ಮಡಿಲಲ್ಲಿ ಆಟವಾಡಿ, ಒಂದೇ ಪರಿಸರದಲ್ಲಿ ಬೆಳೆದವರು, ಆದರೂ ಅವರ ಸ್ವಭಾವಗಳಲ್ಲಿ ಆಕಾಶ ಭೂಮಿಯಷ್ಟು ಅಂತರ. ಸರಳತೆ, ಸೌಜನ್ಯ, ಗಂಭೀರತೆಗೆ ಇನ್ನೊಂದು ಹೆಸರು ಎನ್ನುವಂತಿರುವ, ಸಂಗೀತದಲ್ಲಿ ತೃಪ್ತಿ ಕಾಣುವ ಅದನ್ನೇ ಬದುಕಾಗಿಸಿಕೊಂಡು ಕಾಶೀನಾಥ ಶಾಸ್ತ್ರಿಗಳ ಮೊಮ್ಮಗಳಾಗಿ ಉಳಿದುಬಿಡಲು ಇಚ್ಛಿಸುವ ಇಂದಿರ. ತನ್ನ ಆಸೆ, ಕನಸುಗಳಿಗೆ ಎಂತಹ ಸ್ವಾರ್ಥಕ್ಕಾದರೂ ಇಳಿದು ಆಕಾಶಕ್ಕೆ ಏಣಿ ಹಾಕುವ ವಾರಿಧಿ, ತೀರಾ ಮಹತ್ವಾಕಾಂಕ್ಷಿ. ಶ್ರೀಮಂತರಾಗಿ, ಐಷಾರಾಮಿಯಾಗಿ ಬದುಕುವುದೇ ಗುರಿಯಾಗಿಸಿಕೊಂಡವಳು, ಅವಳ ವಿದ್ಯಾಭ್ಯಾಸದ ಉದ್ದೇಶವೂ ಹಣ ಸಂಪಾದನೆ. ಮೊಮ್ಮಕ್ಕಳಿಗಾಗಿ ಜೀವನ ಮುಡಿಪಾಗಿಟ್ಟ ಹಿರಿಯರು, ಗೆಳೆಯನ ಸಂಸಾರದ ಭಾರ ಹೊರಲು ಸಿದ್ಧವಾಗಿರುವ ನಂಜುಂಡಯ್ಯ. ಇನ್ನು ಮಕ್ಕಳಿಗಾಗಿ ಗಂಡನಿಂದಲೂ ದೂರವಾಗಿ, ಒಂಟಿ ಜೀವನ ನಡೆಸುತ್ತಾ ಮಕ್ಕಳನ್ನು ಬೆಳೆಸುವ ಮೇಧಿನಿ, ಅದ್ಭುತ ವ್ಯಕ್ತಿತ್ವದ ತಾಯಿ. ತಂದೆ ತಾಯಿಯ ದಾಂಪತ್ಯ ಜೀವನದಿಂದ, ಜೊತೆಗೆ ಮದುವೆಯಾಗಬೇಕಾದ ಅನಿವಾರ್ಯಕ್ಕೆ ಒಳಗಾಗಿ ಕಾಂಟ್ರ್ಯಾಕ್ಟ್ ಮದುವೆಯಾಗುವ ಶ್ರೀಹರಿ, ಅಷ್ಟೇ ಬುದ್ಧಿವಂತ ಹಾಗೂ ಗಂಭೀರ. ಮಿತ್ರ ವಿಂದಳನ ವಿಶಿಷ್ಟ ವ್ಯಕ್ತಿತ್ವ ಕಾದಂಬರಿಯ ಆಕರ್ಷಣೆ.." ಇದಿಷ್ಟು ರಾಗಸುಧಾ ಕಾದಂಬರಿಯ ಕಥಾವಸ್ತು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE