ಲೇಖಕಿ ವೇದಾಮಂಜುನಾಥನ್ ಅವರ ಕಥಾಸಂಕಲನ ಸರಿದ ತೆರೆ. ಸರಿದ ತೆರೆ ಎಂಬುದು ಸಂಕಲನದ ಒಂದು ಕಥೆ. ಈ ಕಥೆಯಲ್ಲಿ ಲೇಖಕಿಯೊಬ್ಬಳ ಬಾಳಿನ ಕಥೆಯನ್ನು ಒಳಗೊಂಡಿದೆ. ಇದರೊಂದಿಗೆ ಇಂದು ನನ್ನದಾದರೆ, ಕನಸೆತ್ತ ಕರಗಿತು, ಹೊಂಗಿರಣ, ಅವಲಂಬನೆ, ತ್ಯಾಗ, ಮುಡಿಗೆ ಏರದ ಹೂವು, ಪ್ರೀತಿ ಎಂದರೆ, ಸ್ನೇಹವೆಂದರೆ, ಒಗಟಾದವಳು, ಎಲ್ಲ ಮರೆತಿರುವಾಗ, ವಸುಂಧರಳ ಹಿಂದೆ... ಮುಂತಾದ ಅನೇಕ ಕಥೆಗಳಿವೆ. ಸಂಕಲನದಲ್ಲಿನ ಅನೇಕ ಕಥೆಗಳು ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ, ಮಲ್ಲಿಗೆ, ಮಂಗಳ, ಗೃಹಶೋಭಾ, ಪ್ರಿಯಾಂಕ, ಪ್ರಜಾಪ್ರಗತಿ ಮುಂತಾದ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಲ್ಲಿಗೆ ಮಾಸ ಪತ್ರಿಕೆಯ ಸಂಪಾದಕರಾದ ಎನ್.ಎಸ್. ಶ್ರೀಧರಮೂರ್ತಿ ಅವರು ಈ ಸಂಕಲನಕ್ಕೆ ಮುನ್ನುಡಿಯನ್ನು ಸಹ ಬರೆದಿದ್ದಾರೆ. ಸಂಕಲನದ ಎಲ್ಲಾ ಕಥೆಗಳು ವಿಭಿನ್ನ ಕಥಾವಸ್ತುವನ್ನು ಒಳಗೊಂಡಿವೆ.
ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ. ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ವೇದಾಮಂಜುನಾಥನ್ ರವರ ಮಕ್ಕಳ ...
READ MORE