‘ಮೋಸದ ಜಾಲ’ ಕೃತಿಯು ಎ.ಸರಸಮ್ಮ ಅವರ ಪತ್ತೇದಾರಿ ಕಾದಂಬರಿಯಾಗಿದೆ. ಮೋಸದ ಜಾಲಕ್ಕೆ ಸಿಲುಕಿದವರ ನೊಂದ ಆರ್ತನಾದವನ್ನು ವಿವರಿಸುವ ಲೇಖಕಿ ಸಿರಿ, ಸಂಪತ್ತನ್ನು ಅನುಭವಿಸುವ ವ್ಯಾಮೋಹದಿಂದ ಮೋಸ, ವಂಚನೆ, ಅನ್ಯಾಯಗಳನ್ನು ಮಾಡುತ್ತಾ ಒಳ್ಳೆಯ ತನವನ್ನು ನಂಬಿಕೆಯನ್ನು ತನ್ನ ಬಡವಾಳವಾಗಿಸಿಕೊಂಡು ಮೋಸದ ಬಲೆ ಬೀಸಿ ತನ್ನ ಜಾಲದಲ್ಲಿ ಹಿಡಿದಿಟ್ಟು ಸಂಪಾದನೆಗೆ ಹಲವು ಮಾರ್ಗಗಳನ್ನು ಹುಡುಕುತ್ತಾ ಅಮಾಯಕರನ್ನು ಬಲಿಪಶುಗಳಾಗಿ ಮಾಡಿ ದುಷ್ಟ ಜನರು ಕೇಕೆ ಹಾಕಿ ಮೆರೆಯುತ್ತಾರೆ ಎನ್ನುತ್ತಾರೆ. ಮನುಜರ ಕಪಟ, ಮೋಸ, ವಂಚನೆ ತುಂಬಿದ್ದರೂ ನಯವಾದ ಮಾತುಗಳನಾಡುವ ಜನರ ನಡುವೆ ಬಾಳಬೇಕು. ಆದರೆ ಅವರ ಮಾತುಗಳನ್ನು ನಂಬಿ ಮೋಸ ಹೋಗದೆ ಎಚ್ಚರದಿಂದ ಬಾಳು ಸಾಗಿಸುತ್ತ ಅನೇಕ ಕಷ್ಟ, ನೋವು, ತೊಂದರೆ, ಸಮಸ್ಯೆಗಳು ಎದುರಾದರೂ ಚಾಣಾಕ್ಷತನದಿಂದ ಹೆದರದೆ ಎದುರಿಸಿ ನಿಂತು ಗೆಲ್ಲುವುದನ್ನು ಕಲಿತಾಗ, ಕಷ್ಟಗಳಿಂದ ಮುಕ್ತಿ ಪಡೆದು ಸಂತೋಷದಿಂದ ಬಾಳುತ್ತೇವೆ ಎನ್ನುವ ಸಂದೇಶ ನೀಡುವ ಕಾದಂಬರಿ ಇದಾಗಿದೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE