'ಕಿಲಿಗ್’ ಜಯರಾಮಾಚಾರಿ ಅವರ ಕಾದಂಬರಿಯಾಗಿದೆ. ಇದು ಮನಸ್ಸುಗಳ ಕಥೆ. ಮನಸ್ಥಿತಿಗಳ ಕಥೆ. ಈ ಕಾಲಮಾನದ ದೊಡ್ಡ ಸಂಖ್ಯೆಯ ಸಮೂಹವೊಂದರ ಕಥೆ. ಹೊರಗಿನ ಪ್ರಪಂಚಕ್ಕೆ ಮುಕ್ಕಾಲು ಭಾಗಕ್ಕಿಂತ ಕಡಿಮೆ ತಾಕದಂತೆ, ಅಭಿಪ್ರಾಯ, ಅಸಹನೆ, ಅಭಿರುಚಿಗಳ ಹೊರಗೆಡವದಂತೆ ಬದುಕುವುದು ಅಸಾಧ್ಯವಾದ ಕಾಲಮಾನದಲ್ಲಿ ನಾವೀಗ ಇದ್ದೇವೆ. ಪ್ರತಿ ದಿನ, ಪ್ರತಿ ಕ್ಷಣ ನಮ್ಮನ್ನು ಯಾವುದೋ ಹೊಸ ಆಮಿಷಕ್ಕೆ ಕನೆಕ್ಟ್ ಮಾಡಲು ಹವಣಿಸುವ ಸೋಶಿಯಲ್ ಮೀಡಿಯಾಗಳಿಂದ ಸುತ್ತುವರಿಯಲ್ಪಟ್ಟಿದ್ದೇವೆ. ಮನಸ್ಸಿನ ಒಳಪದರಗಳಲ್ಲಿ ಅಡಗಿರುವ ವಿಕಾರಗಳಿಗೆಲ್ಲ ಹೊರಬರುವ ಹೊಸ ಹೊಸ ದಾರಿಗಳು ಇಲ್ಲೀಗ ಲಭ್ಯವಿದೆ. ನಾವು ತೆರೆಯ ಮೇಲೆ ನೋಡುವ ನಾಯಕರು ಅಲ್ಲಿ ತಾವು ಆವಾಹಿಸಿಕೊಂಡ ಆದರ್ಶಗಳನ್ನೇ ತಮ್ತಮ್ಮ ವಯಕ್ತಿಕ ಬದುಕುಗಳಲ್ಲಿ ಮೀರುತ್ತ, ಛಿದ್ರವಾಗಿಸುತ್ತ ಬದುಕಿರುವಾಗ 'ಬೇಲಿ ದಾಟುವುದು' ನಮಗೆಲ್ಲ ಸಹಜವಾಗಿಹೋಗಿದೆ. ಎಲ್ಲವಕ್ಕೂ ಸಮರ್ಥನೆಗಳೂ, ನಿದರ್ಶನಗಳೂ ಕಾಲು ಕಾಲಿಗೆ ಸಿಕ್ಕುವ ಸಮಾಜದಲ್ಲಿ ಮನಸ್ಸು ಸರಿ-ತಪ್ಪುಗಳ ನಡುವೆ ಜೀಕಾಡುತ್ತದೆ. ಅಂಥದೇ ಸುಳಿಗೆ ಸಿಲುಕುವ ಈ ಹೊತ್ತಿನ ವರ್ಕಿಂಗ್ ದಾಂಪತ್ಯವೊಂದರ ನವಿರಾದ ಕಥೆ 'ಕಿಲಿಗ್'. ಲೇಖಕರೇ ಹೇಳಿರುವಂತೆ ಪ್ರೇಮ ಹಾಗೂ ಕಾಮ ನಡುವೆ ತೆಳುವಾದ ಗಡಿ ರೇಖೆಯಿರುವ, ಥಟ್ಟನೆ ಗುರುತಿಸಲಾಗದ ಎರಡು ಸ್ಥಿತಿಗಳು. ಕೆಲ ವರ್ಷಗಳ ಹಿಂದೆ ಪ್ರೀತಿ, ಪ್ರೇಮ, ದಾಂಪತ್ಯಗಳ ಬಗ್ಗೆ ಮಾತಾಡುತ್ತ ಸ್ನೇಹಿತನೊಬ್ಬ "ಪ್ರತಿಯೊಂದು ಪ್ರೇಮ ಸಂಬಂಧವೂ ಭಾವನೆ ಹಾಗೂ ಕಾಮನೆಗಳ ಹದವಾದ ಮಿಶ್ರಣವಾಗಿರಬೇಕು. ಆದರೆ ಕೆಲವರಲ್ಲಿ ಯಾವುದೋ ಒಂದು ಹೆಚ್ಚಿದ್ದು ಇನ್ನೊಂದು ಕಡಿಮೆಯಿರುವುದೇ ಈಗಿನ ಪ್ರೇಮ ಹಾಗೂ ದಾಂಪತ್ಯಗಳ ವೈಫಲ್ಯಕ್ಕೆ ಕಾರಣ" ಎಂದಿದ್ದ. ಈ ಎರಡಂಶಗಳ ಮೇಲಾಟಕ್ಕೊಳಗಾಗುವ ವ್ಯಕ್ತಿಯ ಪಾಡಿನ ಚಿತ್ರಣ ಕಿಲಿಗ್ ನಲ್ಲಿದೆ.
ಬೆಂಗಳೂರಿನವರು, ನಮ್ಮ ಮೆಟ್ರೋದಲ್ಲಿ ಉದ್ಯೋಗ. ಅಡಕಸಬಿ ಅಡ್ಡ ಕ್ಲಬ್ ಹೌಸ್ ನ ರೂವಾರಿ, ನಿತ್ಯ ಓದಿನ ಜಾತ್ರೆಯಾದ ಓದು ಜನಮೇಜಯ ಕಾರ್ಯಕ್ರಮ ಶುರು ಮಾಡಿದವರು. ಬ್ಲಾಗ್ ಬರಹಗಾರರು ಮತ್ತು ಸಿನಿಕರ್ತರು ಕೂಡ.ಕೆಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಕೃತಿ : ಕರಿ ಮುಗಿಲ ಕಾಡಿನಲಿ ...
READ MORE