ಕನ್ನಡಿಗರ ಕರ್ಮಕಥೆ ಅಥವಾ ವಿಜಯನಗರ ರಾಜ್ಯದ ನಾಶ-ಕೃತಿಯನ್ನು ಗಳಗನಾಥರು ಬರೆದಿದ್ದು, ವಿಜಯನಗರದ ನಾಶವನ್ನು ಕನ್ನಡಿಗರ ದುಸ್ಥಿತಿ ಎಂದೇ ಅಭಿಪ್ರಾಯಪಟ್ಟಿರುವ ಕಾದಂಬರಿ. 1916ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿತ್ತು. ಮದರಾಸು ಸಕಾರವು ಈ ಕೃತಿಯನ್ನು ಪಠ್ಯವಾಗಿಸಿತ್ತು. ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯನ ಸಾಮರ್ಥ್ಯಗಳನ್ನು ವರ್ಣಿಸುವ ಜೊತೆಗೆ ಆತನಿರುವವರೆಗೂ ಆದಿಲ್ ಶಾಹಿ ದೊರೆಗಳಿಗೆ ವಿಜಯನಗರದ ಮೇಲೆ ದಂಡೆತ್ತಿ ಹೋಗುವ ಧೈರ್ಯವಿರಲಿಲ್ಲ ಎಂದೂ ಶ್ರೀ ಕೃಷ್ಣದೇವರಾಯನ ಆಡಳಿತವು ವೈಭವಪೂರ್ಣವಾಗಿತ್ತೆಂದೂ ನಂತರ ಅದು ವೈರಿಗಳನ್ನು ಕ್ರಮೇಣ ನಿರ್ಲಕ್ಷ್ಯದ ಪರಿಣಾಮ ನಾಶವಾಗುತ್ತಾ ಬಂದಿತೆಂದು, ಹೀಗೆ ಐತಿಹಾಸಿಕ ಸಂಗತಿಗಳೊಂದಿಗೆ ಕಾದಂಬರಿಯು ತನ್ನಲ್ಲಿದ್ದ ವಸ್ತುವಿನ ಬಹುದೊಡ್ಡ ಸುರುಳಿಯನ್ನೇ ಬಿಚ್ಚುತ್ತಾ ಹೋಗುತ್ತದೆ.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE