ಶಿವರಾಮ ಕಾರಂತರ ಕಾದಂಬರಿ-ಸಂನ್ಯಾಸಿಯ ಬದುಕು, ವಿಮರ್ಶಕರ ಗಮನ ಸೆಳೆದಿದೆ. ಸೋಗಿನ ಸನ್ಯಾಸತ್ವಕ್ಕಿಂತ ಮಾನವೀಯ ಅಂತಃಕರಣದ ಸಂಸಾರಿಕ ಬದುಕು ಸಾರ್ಥಕ ಎಂಬ ಸಂದೇಶ ಈ ಕಾದಂಬರಿಯಲ್ಲಿದೆ.
ಸುಮಿತ್ರೆಗೆ ಕುಂದಾಪುರ ಬಳಿಯ ಶಂಕರರಾಯರಿಗೆ ಮದುವೆ ಮಾಡಿಕೊಟ್ಟಿದ್ದು, ಗೋಪು ಹಾಗೂ ರಾಧೆ ಎಂಬ ಮಕ್ಕಳಿದ್ದರು. ಮೊದಮೊದಲು ಚೆನ್ನಾಗೇ ನೋಡಿಕೊಂಡಿದ್ದ. ಸ್ವಾರ್ಥ ಸುಖದ ಚಿಂತನೆಯಲ್ಲಿ ಮೈಮರೆತಿದ್ದ. ಸಾಲ ಮಾಡಿದ್ದ. ತಾಳಿ ಸೇರಿದಂತೆ ಚಿನ್ನಾಭರಣಗಳನ್ನು ಮಾರಿದ್ದ. ನಂತರ ಆತ ಊರು ಬಿಡುತ್ತಾನೆ. ಉತ್ತರ ಭಾರತದುದ್ದಕ್ಕೂ ಸಂಚರಿಸುತ್ತಾನೆ. ಹೆಸರು ಶಿವಾನಂದ ಎಂದು ಬದಲಾಯಿಸಿಕೊಳ್ಳುತ್ತಾನೆ. ಭಾರತೀಯ ಉಡುಗೆಯಲ್ಲಿದ್ದ ಅಮೆರಿಕನ್ ಮಹಿಳೆಯನ್ನು(ಎನ್ನಾಬ್ರೈಟ್) ಭೇಟಿಯಾಗುತ್ತಾನೆ. ಆಕೆಗೆ ಅವಳ ಸಂಸ್ಕೃತಿ ಬೇಸರವುಂಟಾಗಿ ಭಾರತೀಯ ಸಂಸ್ಕೃತಿ ಉತ್ತಮ ಎಂದು ನಂಬಿಕೊಳ್ಳುತ್ತಾಳೆ. ಆಕೆಯೇ ಈತನಿಗೆ ಕೃಷ್ಣಾನಂದ ಎಂದು ಹೆಸರಿಸಿ ಆತನ ಬಗ್ಗೆ ಲೇಖನಗಳನ್ನು ಬರೆಯುತ್ತಾಳೆ. ಹಣ-ಕೀರ್ತಿ ಹೆಚ್ಚಿ ಮುಂಭೈಯ ಖಾರ್ ನಲ್ಲಿ ಆಶ್ರಮ ಸ್ಥಾಪಿಸುತ್ತಾರೆ. ಇತ್ತ ಕಡೆ ಸುಮಿತ್ರೆಗೆ ರುಕ್ಮಾಯಿಯ ಪರಿಚಯವಾಗುತ್ತದೆ. ಕೃಷ್ಣಾನಂದನ ಹೆಸರು ಕೀರ್ತಿ ಬೆಳೆಯುತ್ತದೆ. ಹೇಗೋ ಏನೋ, ಕೃಷ್ಣಾನಂದನು ಕುಂದಾಪುರದ ಶಂಕರರಾಯ ಎಂಬುದು ಜನರಿಗೆ ತಿಳಿದು ಹೋಗುತ್ತದೆ. ಸುಮಿತ್ರೆಯ ಕಷ್ಟಕ್ಕೆ ರುಕ್ಮಾಯಿ ಸಹಾಯ ಮಾಡುತ್ತಾಳೆ. ಸಮಿತ್ರೆಯ ಮನೆಯಲ್ಲಿ ರುಕ್ಮಾಯಿಯ ಫೋಟೋ ಶಾಶ್ವತವಾಗೇ ಉಳಿಯುತ್ತದೆ. ಬದುಕಿನಲ್ಲಿ ಕಷ್ಟದಲ್ಲಿರುವಾಗ ಸಹಾಯಕ್ಕೆ ಬರುವವರೇ ನಿಜವಾದ ಸಂಬಂಧಿಕರು ಎಂಬ ಸಂದೇಶ ಈ ಕಾದಂಬರಿಯಲ್ಲಿದೆ.
ಮೈಸೂರಿನ ಉಷಾ ಸಾಹಿತ್ಯ ಮಾಲೆಯು 1948ರಲ್ಲಿ (ಪುಟ: 208) ಈ ಕಾದಂಬರಿಯು ಮೊದಲ ಬಾರಿಗೆ ಪ್ರಕಟಗೊಂಡಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE