ಭಾರತೀಯ ಇಂಗ್ಲಿಷ್ ಲೇಖಕರಲ್ಲಿ ಪ್ರಮುಖರಾದ ಶಶಿ ದೇಶಪಾಂಡೆ ಅವರ ಕೃತಿ ಸ್ಮಾಲ್ ರಿಮೇಡಿಯಸ್ ಅನ್ನು ಕನ್ನಡಕ್ಕೆ ’ ಭವಾನಿಪುರ’ ಎಂಬ ಶೀರ್ಷಿಕೆಯಡಿ ತಂದವರು ವಿಜಯಾ ಕಣೇಕಲ್.
ಭವಾನಿಪುರ ಕೃತಿಯ ಮುಖ್ಯ ಪಾತ್ರಗಳು ಇಬ್ಬರು ಮಹಿಳೆಯರು. ಒಬ್ಬರು ಸಂಗೀತದ ಸೆಳೆತಕ್ಕೆ ಒಳಗಾದವರು. ಮತ್ತೊಬ್ಬರು ಕಮ್ಯೂನಿಸಂನಲ್ಲಿ ನಿಷ್ಟೆಯನ್ನಿಟ್ಟುಕೊಂಡವರು. ಇಬ್ಬರೂ ತಮ್ಮ ತಮ್ಮ ಕುಟುಂಬಗಳಿಂದ ಹೊರಬಂದು ಸಾಧನೆಯ ಕಠಿಣ ಮಾರ್ಗದಲ್ಲಿ ಶ್ರಮಿಸಿ, ಅದರಲ್ಲೇ ಸಾರ್ಥಕತೆ ಕಂಡುಕೊಳ್ಳಲು ಯತ್ನಸುವ ಚಿತ್ರಣ ಈ ಕೃತಿಯಲ್ಲಿದೆ.
ಸಾವಿತ್ರಿಬಾಯಿ ಇಂದೋರ್ ಕರ್ ಸಂಪ್ರದಾಯಸ್ಥ ಹಿಂದೂ ಕುಟುಂಬದಿಂದ ಬಂದವಳು. ಸಂಗೀತದ ಹಂಬಲದಿಂದ ಪ್ರಿಯಕರ ಹಾಗೂ ತಬಲಾ ವಾದಕನಾದ ಗುಲಾಮ್ ಸಾಬ್ ನೊಂದಿಗೆ ಪಲಾಯನಮಾಡಿ ತನ್ನ ಇಡೀ ಬದುಕನ್ನು ಸಂಗೀತ ವೃತ್ತಿಗೆ ಸಮರ್ಪಿಸಿಕೊಂಡವಳು. ಸೂಕ್ಷ್ಮ ಹಾಗೂ ಗಟ್ಟಿ ಮನಸ್ಸಿನವಳಾದ ಲೀಲಾ ತನ್ನ ಇಡೀ ಜೀವನವನ್ನು ಕಮ್ಯೂನಿಷ್ಟ್ ಪಾರ್ಟಿಯ ಚಟುವಟಿಕೆಗಳಿಗೆ ಹೇಗೆ ತನ್ನನ್ನು ತಾನು ತೆತ್ತುಕೊಂಡಳು ಎನ್ನುವುದನ್ನು ಈ ಕೃತಿ ಚಿತ್ರಿಸುತ್ತದೆ.
ವಿಜಯಾ ಕಣೇಕಲ್ ಅವರು ಇಂಗ್ಲಿಷ್ ಭಾಷೆಯ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ ಇವರು ಶಶಿ ದೇಶಪಾಂಡೆಯವರ 'ನಾರಾಯಣಪುರದ ಒಂದು ಘಟನೆ', 'ಆ ದೀರ್ಘ ಮೌನ', 'ಬಾಪು ತೀರಿಹೋದ ಆ ದಿನ ಮತ್ತು ಇತರ ಕತೆಗಳು', 'ಭವಾನಿಪುರ' , ಕಾವೇರಿ ಹರಿದಳು ಇವರ ಅನುವಾದಿತ ಕೃತಿಗಳು. 'ಕೆರೆಯ ತೀರದಲ್ಲಿ' ಪ್ರಬಂಧಕ್ಕೆ ದ್ವಿತೀಯ (1981)ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕಥೆ ಇದೆ. ಆದ್ಯ ರಂಗಾಚಾರ್ಯರ ರಾಮ ಇನ್ ಸಾಂಸ್ಕೆಟ್ ಲಿಟ್ರೇಚರ್, ಶಶಿ ದೇಶಪಾಂಡೆಯವರ Small remedies ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE