'ನೆಲ ಮುಗಿಲು' ಅಂಕಣ ಬರಹದಿಂದಲೇ ಜನಪ್ರಿಯರಾದ ಆತ್ಮೀಯ ನಾರಾಯಣ ಯಾಜಿ ಸಾಲೆಬೈಲುರವರು ತಮ್ಮ ಗಂಭೀರ ಲೇಖನಗಳಿಂದ ಓದುಗರ ಗಮನಸೆಳೆದವರು.ಪಾರಲೌಕಿಕದಿಂದ ಹಿಡಿದು ವರ್ತಮಾನದ ಲೌಕಿಕ ಪ್ರಪಂಚವನ್ನು, ಇತಿಹಾಸ ಸಾಹಿತ್ಯದಂತಹ ಸಾಂಸ್ಕ್ರತಿಕ ವಿಷಯ-ವಿಚಾರಗಳನ್ನು ಭಾರತೀಯ ಚಿಂತನಾಕ್ರಮದಲ್ಲಿ ಹೊಸ ವಿನ್ಯಾಸ ಚೌಕಟ್ಟಿನೊಂದಿಗೆ ಅನೂಹ್ಯ ಆಯಾಮದಲ್ಲಿ ನೋಡಿದವರು ನಾರಾಯಣ ಯಾಜಿಯವರು.ಈ ಕೃತಿಯಲ್ಲಿಯ ಪ್ರಬಂಧಗಳು ವಿದ್ವಾಂಸರಿಗೂ ಆಕರವಾಗುವಂತಹವುಗಳು. ಆದ್ದರಿಂದ ಈ ಗ್ರಂಥವು ಪಂಡಿತರಿಗೆ ಪಾಠಕರಿಗೆ ಅಗತ್ಯ ಕೈಪಿಡಿಯಗುವುದರಲ್ಲಿ ಸಂಶಯವಿಲ್ಲ. ' ನೆಲ ಮುಗಿಲು' ಎಂಬುದು ದ್ಯಾವಾ ಪೃಥಿವಿಯ ಶುದ್ಧ ಕನ್ನಡ ಪರ್ಯಾಯ ಪದವಾಗಿದೆ.ಹಾಗೆಯೇ ಪ್ರಕೃತಿ ಪುರುಷ ತಾತ್ವಿಕತೆಯೂ ಹೌದು. ಈ ಅಗಾಧ ವಿಷಯ ವ್ಯಾಪ್ತಿಯ ನುಡಿ ಬೆಡಗು ಏನೆಲ್ಲಾ ದರ್ಶಿಸಲು, ದರ್ಶನ ಪಡೆಯಲು, ದಿಟ್ಟಿಸಲು ಸಾಧ್ಯವೋ ಅವೆಲ್ಲದರ ಚಿಂತನೆಯ ಬೆಳಕು ಕೂಡ ಆಗಿದೆ ಎಂದು ಅಶೋಕ ಹಾಸ್ಯಗಾರ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.