ವಸುಂಧರಾ

Author : ಕೃಷ್ಣಮೂರ್ತಿ ಪುರಾಣಿಕ

₹ 65.00

Synopsys

ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ್ ಅವರ ಸಾಮಾಜಿಕ ಕಾದಂಬರಿ ವಸುಂಧರಾ. ಇದರಲ್ಲಿ ಬರುವ ಪ್ರಮುಖ ಪಾತ್ರಧಾರಿಗಳು ವಸುಂಧರಾ , ಸೋಮನಾಥ. ಹಾಗೆ ಜಯಶ್ರೀ , ಗಾಯತ್ರಿ , ಡಾ! ಸದಾನಂದರಾಯರು , ವಿಶ್ವಂಭರಿತಾಯಿ , ಸುಬ್ಬಾಶಾಸ್ತ್ರೀಗಳು . ಇಲ್ಲಿ ಗಾಯತ್ರಿ ಶ್ರೀಮಂತ ಇಂಜಿನಿಯರ್ ಅವರ ಮಗಳು ನೋಡಲು ಚೆಲುವೆ. ಈಕೆಗೆ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಬಹಳ ಆಕಾಂಕ್ಷಿ. ಇವಳು ಗಂಡಸರನ್ನು ಕೀಳಾಗಿ ನೋಡುತ್ತಿದ್ದಳು ಕೂಡ ಆ ಕಾರಣವಾಗಿ. ಇವಳಿಗೆ ತನ್ನ ಶ್ರೀಮಂತಿಕೆಗೆ ಸರಿಸಮಾನವಾದವರನ್ನ, ಚೆಲುವೆಯರನ್ನ ಮಾತ್ರ ಗೆಳೆತನ ಬಯಸುತ್ತಿದ್ದಳು. ಇನ್ನು ವಸುಂಧರಾ ಇವಳು ಕಥಾ ನಾಯಕಿ. ಇವಳು ಕೂಡ ಬಾರೀ ಚೆಲುವೆ. ಇವಳು ಗಾಯತ್ರಿ ತಂದೆಯ ಬಳಿ ಗುಮಾಸ್ತ ಕೆಲಸದಲ್ಲಿ ಆಳಾಗಿ ದುಡಿಯುತ್ತಿದ್ದವರು. ಗಾಯತ್ರಿ ಮತ್ತು ವಸುಂಧರಾ ಒಂದೇ ವಯಸ್ಸಿನವರಾಗಿದ್ದು ವಸುಂಧರಾ ಚೆಲುವೆ ಎನ್ನುವ ಕಾರಣಕ್ಕೆ ಯಜಮಾನಿಯಾದ ಗಾಯತ್ರಿ ಇವಳನ್ನು ಗೆಳತಿಯನ್ನಾಗಿ ಮಾಡಿಕೊಂಡಿದ್ದಳು. ಆದರೂ ಕೆಲವೊಮ್ಮೆ ಇವಳನ್ನು ಆಡಿಕೊಳ್ಳುತ್ತಿದ್ದಳು. ಇದನ್ನೆಲ್ಲ ವಸುಂಧರಾ ಸಹಿಸುತ್ತಿರಲಿಲ್ಲ. ಆಗಾಗ ಮಾತಿಗೆ ಇಳಿದು ಗಾಯತ್ರಿಯನ್ನು ತಿದ್ದುವ ಪ್ರಯತ್ನ ಮಾಡುತ್ತಿದ್ದಳು. ಅವಳೆಷ್ಟು ತಿದ್ದಿದರೂ ಗಾಯತ್ರಿ ಮತ್ತೊಬ್ಬರ ರೂಪವನ್ನು ಟೀಕಿಸುತ್ತಿದ್ದಳು. ಹೀಗೆ ಕಾಲೇಜಿನಲ್ಲಿ ಇವಳದ್ದು ಪ್ರತಿದಿನ ಇದ್ದದ್ದೆ. ಜಯಶ್ರೀ ಡಾಕ್ಟರ್ ಸದಾನಂದ ಅವರ ಮಗಳು ಅವಳು ಇದೇ ಕಾಲೇಜಿಗೆ ಬರುತ್ತಿದ್ದು ಅವಳನ್ನು ಟೀಕಿಸುತ್ತಿದ್ದಳು. ಒಮ್ಮೆ ಸಹಿಸದೆ ಜಯಶ್ರೀ ಗಾಯತ್ರಿಯ ನೀರು ಇಳಿಸಿ ಅವಳ ಸೊಕ್ಕು ಮುರಿದಳು. ಇವರಿಬ್ಬರನ್ನು ಸರಿಮಾಡುವಲ್ಲಿ ವಸುಂಧರಾ ಜಾಣತನ ಮೆರೆದಳು. ಮುಂದೆ ಮೂವರು ಜೀವದ ಗೆಳತಿಯರಾದರು.ಹೀಗಿರುವಾಗ ಕಥೆಯಲ್ಲಿ ಸೋಮನಾಥನ ಪ್ರವೇಶ ಆಗುತ್ತೆ. ಮುಂದೆ ಕಥೆಯಲ್ಲಿ ಬರುವ ತಿರುವುಗಳೇನು ಎಂಬುದೇ ಕಥೆಯ ಜೀವಾಳವಾಗಿದೆ.

About the Author

ಕೃಷ್ಣಮೂರ್ತಿ ಪುರಾಣಿಕ
(05 September 1911 - 09 November 1985)

ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು  ಬೆಳ್ಳೆತೆರೆ ಕಂಡಿವೆ.  'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...

READ MORE

Related Books