ಶಾಂತಾರಾಮ ಸೋಮಯಾಜಿ ಕತೆಗಳಲ್ಲಿ ಹೊಸಲೋಕವಿರುತ್ತದೆ. ವಿನೂತನವಾದ ಬರಹ ಶೈಲಿಯಲ್ಲಿ ಕತೆ ಹೇಳುವ ಶಾಂತಾರಾಮರ ಮೂರನೆಯ ಕಾದಂಬರಿ `ಕುರುಡ ಕುರುಡಿ‘. ಇಲ್ಲಿಯೂ ಕೂಡಾ ಹೊಸತೇನನ್ನೋ ಹೇಳುವ ಕೆಲಸ ನಡೆದಿದೆ. ಹೊಸ ಕಥಾವಸ್ತು. ಓದುಗರನ್ನು ಹಿಡಿದಿಟ್ಟುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಶಾಂತಾರಾಮರ ವೈಚಾರಿಕ ವಿಷಯಗಳೂ ಇವೆ. ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಜನಮೆಚ್ಚುಗೆ ಗಳಿಸಿದ `ಕುರುಡ ಕುರುಡಿ‘ಯನ್ನು ಬೆಳಕಿಗೆ ತಂದಿದ್ದಾರೆ ಪ್ರಕಾಶಕ ನಾರಾಯಣ ಮಾಳ್ಕೋಡ್. ಮುಖಪುಟದ ಕೆಟ್ಟ ವಿನ್ಯಾಸವನ್ನು ಕಣ್ಣುಮುಚ್ಚಿ ಕ್ಷಮಿಸಿದರೆ ಪುಸ್ತಕ `ಸುಮುಖ‘.
ಶಾಂತಾರಾಮ ಸೋಮಯಾಜಿ ಅವರು ಲೇಖಕರು. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃತಿಗಳು: ಮೇರಿಯ ಕತೆ, ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ, ಅರ್ಥಮಂತ್ರಿ ಮತ್ತು ಹಂದಿಗಳು, ದೇಶವಿದೇಶಗಳ ವಿನೋದ ಕತೆಗಳು, ಚಿಟ್ಟೆಹಾಡು ಮತ್ತು ಇರುವೆ ಮದುವೆ. ಮಿತಿ ಇರದ ಖುಷಿ ಅದು ಸೈನ್ಸ್, ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್. ...
READ MORE