‘ಅಮೂಲ್ಯ’ ಎಂಬುದು ವಿಜಯಲಕ್ಷ್ಮೀ ಅವರ ಕಾದಂಬರಿ. ಕಥಾನಾಯಕಿ ಅಮೂಲ್ಯ ಬಡತನದಲ್ಲಿಯೇ ಬೆಳೆದವಳು. ಆದರೆ ಆಕೆಯ ಅಪ್ರತಿಮ ಸೌಂದರ್ಯದ ಕಾರಣಕ್ಕಾಗಿ ಉದ್ಯಮಿಯೊಬ್ಬರ ಅನುರಾಗಕ್ಕೆ ಸಿಕ್ಕು ಅವನನ್ನು ವರಿಸಿದಳು. ಆಕೆಯ ಬದುಕಿನಲ್ಲಾಗುವ ಏಳು ಬೀಳುಗಳು ಇಲ್ಲಿ ಚಿತ್ರಿತವಾಗಿದೆ. ಉದ್ಯಮ ನಷ್ಟಕ್ಕೆ ಈಡಾಗುವಂತಹ ವಿಚಾರಗಳನ್ನು ಇಲ್ಲಿ ಲೇಖಕಿ ಕಟ್ಟಿಕೊಟ್ಟಿದ್ದಾರೆ. ಆಕೆಯ ಪತಿ ಅಕಾಲಿಕ ಮರಣಕ್ಕೆ ತುತ್ತಾಗಿ ದೊಡ್ಡ ಮೊತ್ತದ ಸಾಲವನ್ನು ಬಿಟ್ಟು ಹೋಗುತ್ತಾನೆ. ಭವ್ಯ ಬಂಗಲೆ ಸುಖದ ಸಾಧನೆಗಳೆಲ್ಲ ಕೈ ಬಿಟ್ಟು ಅಮೂಲ್ಯ ದುಃಖಸ್ಥಿತಿಯ ಸುಳಿಗೆ ಸಿಗುತ್ತಾಳೆ ಮತ್ತು ತನ್ನನ್ನು ವಿಶ್ವಾಸಿಕ ಎಂದು ಭಾವಿಸಿದವನಿಗೆ ಒಪ್ಪಿಸಿಕೊಳ್ಳುತ್ತಾಳೆ. ಆ ವ್ಯಕ್ತಿಯೂ ಆಕೆಗೆ ಮೋಸ ಮಾಡಿದ ಕಾರಣ ಅವಳು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಆದರೆ, ಎದೆ ತುಂಬ ಕರುಣೆ ತುಂಬಿದ ವೈದ್ಯರ ಕೃಪೆಯಿಂದ ಬದುಕಿ ಉಳಿದು ತನ್ನ ಉಳಿಯುವಿಕೆಯ ಜೀವನವನ್ನು ರೋಗಿಗಳ ಆರೈಕೆಗೆ ಮುಡಿಪಾಗಿ ಇರಿಸುತ್ತಾಳೆ. ಆ ಹೆಸರಾಂತ ವೈದ್ಯರು ಅವಳ ಪಾಲಿನ ದೇವರಾಗಿ ಆಕೆಯ ಬದುಕಿಗೆ ಆಶ್ರಯದಾತರಾಗುತ್ತಾರೆ. ಈ ಕಾದಂಬರಿಯು ಹೆಣ್ಣಿನ ಬದುಕಿನ ಸುತ್ತಲೂ ಚಿತ್ರಿತವಾಗಿದೆ.
ವಿಜಯಲಕ್ಷ್ಮಿ ಸತ್ಯಮೂರ್ತಿ ಮೂಲತಃ ಬೆಂಗಳೂರಿನವರು. ತಂದೆ ಶ್ರೀನಿವಾಸ ಮೂರ್ತಿ.ತಾಯಿ ಯಶೋದ.ಪತಿ ಸತ್ಯಮೂರ್ತಿ. ಚಾಮರಾಜಪೇಟೆಯ ಶ್ರೀರಾಮ ಶಿಶುವಿಹಾರ, ಮಾಧವ ಕೃಷ್ಣಯ್ಯ ಬಾಲಕಿಯರ ಪ್ರೌಢ ಶಾಲೆ ಹಾಗೂ ಚಾಮರಾಜಪೇಟೆ ಜೂನಿಯರ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಇವರ 'ನವಮಿ' ಕಥಾಸಂಕಲನ ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನ ಎರಡನೇ ಸೆಮಿಸ್ಟರ್ ಡಿಗ್ರಿ ತರಗತಿಗೆ ಪಠ್ಯವಾಗಿದೆ. ಬಸವ ವಿಭೂಷಣ ಪ್ರಶಸ್ತಿ,ಬಸವ ರತ್ನ ಪ್ರಶಸ್ತಿ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಕೆ ಎಸ್ ನ ಕಾವ್ಯ ಪುರಸ್ಕಾರ ಇವರು ಪಡೆದಿರುವ ಪ್ರಶಸ್ತಿಗಳು . ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. 'ಋತುಗಾನ'ಎಂಬ ಸಾಹಿತ್ಯ ಮತ್ತು ...
READ MORE