ಜುಬೇದಾ ನಾಯಕ್ ಒಬ್ಬ ಅದ್ಭುತ ಲೇಖಕಿಯೂ ಹೌದು,ಸಂಘಟಕಿಯೂ ಹೌದು, ಮುಖ್ಯವಾಗಿ ಸಮಾಜಸೇವಕಿಯೂ ಆಗಿದ್ದಾರೆ. ಇವರ ಪರಿಚಯ ಸಾಮಾಜಿಕ ಜಾಲತಾಣದಲ್ಲಿ ಆದರೂ ನನ್ನನ್ನು ಇವರತ್ತ ಸೆಳೆದದ್ದು ಇವರ ಲೇಖನಗಳು. ಇವರು ಬರೆದ ಮೊದಲ ಕಾದಂಬರಿ "ಹದಿ ಹರಯದ ಪ್ರೀತಿ" ಒಂದು ಹೆಣ್ಣು ತನ್ನ ಜೀವನದಲ್ಲಿ ಅನುಭವಿಸಿದ ಕಷ್ಟ, ಕೋಟಲೆಗಳನ್ನು ಮನ ಮುಟ್ಟುವಂತೆ ಬರೆದ ಇವರ ಲೇಖನದ ವೈಖರಿಯೇ ಇವರತ್ತ ನನ್ನನ್ನು ಸೆಳೆಯಿತು. ಇದು ಇವರ ಎರಡನೆಯ ಕಾದಂಬರಿ "ಕಥೆಯಲ್ಲವಿದು ಜೀವನ" ಇದೂ ಒಂದು ವಿಭಿನ್ನ ಕಾದಂಬರಿ. ಈಗಿನ ಹಿರಿಯರ ಜೀವನಶೈಲಿಗೆ ಹೇಳಿ ಮಾಡಿಸಿದಂತಹ ಕೃತಿ ಇದು. ಪ್ರತಿ ಒಬ್ಬರೂ ಓದಲೇ ಬೇಕಾದಂತಹ ಕಾದಂಬರಿ ಇದಾಗಿದೆ. ತಮಗೆ ಸಿಕ್ಕಿದ ವೇಳೆಯನ್ನು ಮನುಷ್ಯ ಹೇಗೆಲ್ಲಾ ಸದುಪಯೋಗ ಪಡಿಸಬಹುದು ಎಂದು ಮನಮುಟ್ಟುವಂತೆ ಬರೆದು, ಎಲ್ಲರ ಮನಸ್ಸಿಗೂ ನಾಟಿದ ಕಾದಂಬರಿಯೇ ಈ' ಕಥೆಯಲ್ಲವಿದು ಜೀವನ'. ಜುಬೇದಾ ಅವರೇ ಹೀಗೆಯೇ ಇನ್ನೂ ಮುಂದೆ ನಿಮ್ಮ ಲೇಖನಿಯಿಂದ ಇಂತಹ ತರತರದ ಲೇಖನಗಳು ಬರಲಿ,ಅದು ಓದುಗರಿಗೆ ದಾರಿದೀಪವಾಗಲಿ ಎಂದು ಹಾರೈಸುತ್ತಾ ನಿಮ್ಮ ಬರೆವಣಿಗೆ ಇನ್ನೂ ಮುಂದೆ ಸಾಗಲಿ ಎಂದು ಇಚ್ಚಿಸುತ್ತೇನೆ. ಇವತ್ತು ಈ ಕಾದಂಬರಿಗೆ ಆಶಯ ನುಡಿಗಳನ್ನು ವಸುಧಾಪ್ರಭು ಅವರು ಬರೆದಿದ್ದಾರೆ.
ಜುಬೇದಾ ನಾಯಕ್.ಅವರು ಹುಟ್ಟಿದ ಊರು ಘಟಪ್ರಭಾ. ಪ್ರಸ್ತುತ ಹಾವೇರಿಯಲ್ಲಿ ನೆಲಸಿದ್ದಾರೆ. ಜುಬೇದಾ ಅವರ ತಂದೆಯ ಹೆಸರು, ಹುಸೇನ್ ಸಾಬ್ ಶೇಖ್. ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಜುಬೇದಾರವರು ಹಿಂದಿ ಭಾಷೆಯ ಪ್ರವೀಣ ಪದವಿ ಪಡೆದಿದ್ದಾರೆ. ಇವರು ಹಾವೇರಿ ವಲಯದ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ತಮ್ಮ 32 ವರ್ಷಗಳ ಸೇವಾವಧಿಯಲ್ಲಿ ಸುಮಾರು ಹತ್ತು ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಸೇವೆ ಮಾಡಿದ್ದಾರೆ. "ಹದಿಹರೆಯದ ಪ್ರೀತಿ" ಇವರ ಚೊಚ್ಚಲ ಕೃತಿ, ಎರಡನೇ ಕೃತಿ "ಕಥೆಯಲ್ಲವಿದು ಜೀವನ" ಕಾದಂಬರಿಯಾಗಿದೆ. ...
READ MORE