ಗುಜರಿ ತೋಡಿ ಎಂಬುದು ಸಂಗೀತದ ಒಂದು ರಾಗ. ಈ ರಾಗವನ್ನು ಪ್ರಧಾನ ವಸ್ತುವಾಗಿಸಿಕೊಂಡು ಈ ಕೃತಿಯನ್ನು ರಚಿಸಿದವರು ಲೇಖಕ ಶಿರೀಷ್ ಜೋಶಿ. ಸಂಗೀತ ಪ್ರಧಾನ ಕಾದಂಬರಿ ಇದು. ತೋಡಿ ಎಂಬುದು ಹಿಂದೂಸ್ತಾನಿ ಸಂಗೀತದಲ್ಲಿ ಒಂದು ಥಾಟ್ ಎಂದೇ ಕರೆಯಲಾಗುತ್ತದೆ. ಈ ಥಾಟ್ ನಲ್ಲಿ ಬಿಲಾಸ್ ಖಾನಿ ತೋಡಿ, ಬಹಾದೂರಿ ತೋಡಿ ಹಾಗೂ ಗುಜರಿ ತೋಡಿ ಎಂಬ ಮೂರು ಪ್ರಮುಖ ರಾಗಗಳಿವೆ. ಕರ್ನಾಟಕ ಸಂಗೀತದಲ್ಲಿ ತೋಡಿ ಹೆಸರಿನ ರಾಗವಿದೆ. ಆದರೆ, ಅದು ಹಿಂದೂಸ್ತಾನಿಯ ಭೈರವಿ ರಾಗಕ್ಕೆ ಹೆಚ್ಚು ಸಮನಾದುದು. ಕಾದಂಬರಿ ಓದುತ್ತಿದ್ದಂತೆ ಸಂಗೀತ ಜ್ಞಾನದ ಹರವು ಹೆಚ್ಚುತ್ತದೆ ಮತ್ತು ಸಂಗೀತಕ್ಕೆ ಸಮರ್ಪಿಸಿಕೊಂಡ ಬದುಕಿನ ಸ್ವರೂಪವನ್ನು ತುಂಬಾ ದಟ್ಟವಾಗಿ ಅನುಭವಕ್ಕೆ ತಂದು ಕೊಡುತ್ತದೆ.
ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರೀಷ ಜೋಶಿ ಅವರು ಸಂಗೀತಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಬರೆಯುವ ಕೆಲವೇ ಲೇಖಕರಲ್ಲಿ ಒಬ್ಬರು. ಬೆಳಗಾವಿ ನಿವಾಸಿ ಆಗಿರುವ ಶಿರೀಷ ಅವರು ಸಾಹಿತ್ಯ, ಸಂಗೀತ, ನಾಟಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತದ ಪ್ರೀತಿ ಅವರಿಂದ ಹಲವು ಪುಸ್ತಕಗಳನ್ನು ಬರೆಸಿದೆ. ಕೃತಿಗಳು: ಕುಮಾರ ಗಂಧರ್ವ, ಬಸವರಾಜ ರಾಜಗುರು, ಕರ್ನಾಟಕದ ಗಂಧರ್ವರು, ಸಂಗೀತ ಲೋಕದ ರಸನಿಮಿಷಗಳು, ಕುಮಾರ ಸಂಗೀತ ...
READ MORE