ಮದುವೆಯ ಕಥಾ ಪ್ರಸಂಗ ’ ಕೃತಿಯು ಮಾಧವ ಕುಲಕರ್ಣಿ ಅವರ ಕಾದಂಬರಿ. ವರ್ತಮಾನದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಲೇಖಕ ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ’ಗೋವಿಂದ ಭಟ್ಟ’ ಎನ್ನುವ ಪಾತ್ರವನ್ನು ಕೇಂದ್ರವಾಗಿರಿಸಿ, ವರ್ತಮಾನದ ಸಂಗತಿಗಳನ್ನು ಜನರಿಗೆ ತಿಳಿಯಪಡಿಸುತ್ತದೆ ಈ ಕಾದಂಬರಿ. ಲೇಖಕ ತನ್ನ ಸುರಕ್ಷಿತ ಪರಿಧಿಯಿಂದ ಹೊರ ಜಗತ್ತಿನ ಪ್ರವೇಶಕ್ಕೆ ಸಿದ್ಧನಾಗುವ ಮೂರನೇ ಆಯಾಮದ ನೋಟವನ್ನು ಇಲ್ಲಿ ಕಾಣಬಹುದು. ಗೋವಿಂದ ಭಟ್ಟರು ಗದುಗಿನ ಸುರಕ್ಷಿತ ವಲಯದಲ್ಲಿ ಎಲ್ಲರಿಗೂ ಪರಿಚಯವಿದ್ದ ವ್ಯಕ್ತಿ, ಪೌರೋಹಿತ್ಯದಿಂದ ಜೀವನೋಪಾಯ ನಡೆಸುತ್ತಿದ್ದರು ಎನ್ನುವ ಅಂಶವನ್ನು ತೆಗೆದುಕೊಂಡು ಕಾದಂಬರಿಯನ್ನು ಬೆಳೆಸುತ್ತಾ ಹೋಗುತ್ತಾರೆ ಲೇಖಕರು. ಇಲ್ಲಿ ಗದುಗಿನ ಭಾಷೆಯನ್ನು ಮತ್ತು ಜೀವನ ಶೈಲಿಯನ್ನು ಕೂಡಾ ಚಿತ್ರಿಸಿದ್ದಾರೆ. ಅಲ್ಲಿನ ಜನರ ಹಿಂದಿ ಸಿನಿಮಾಗಳನ್ನು ನೋಡುವ ಹುಚ್ಚು ಸೇರಿದಂತೆೆ ಅನೇಕ ವಿಚಾರಧಾರೆಗಳ ಕುರಿತು ವಿಶ್ಲೇಷಿಸುತ್ತಾರೆ. ಕಾದಂಬರಿಯಲ್ಲಿ ಹೃದ್ಯ ಪ್ರಸಂಗಗಳು ಕೂಡಾ ವ್ಯಕ್ತವಾಗಿದ್ದು, ಗತಕಾಲದಲ್ಲಿ ನಡೆದ ಮತ್ತು ಭವಿಷ್ಯದಲ್ಲಿ ನಡೆಯಬಹುದಾದ ಕೆಲವೊಂದು ವಿಷಯಗಳ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ. ವರ್ತಮಾನದ ವಿಷಯಗಳನ್ನಾಧರಿಸಿ ಸಾಹಿತ್ಯ ರಚಿಸುವವರಿಗೆ ಈ ಕಾದಂಬರಿ ಒಂದು ಮಾರ್ಗಸೂಚಿಯಂತಿದೆ.
ಲೇಖಕ, ವಿಮರ್ಶಕ ಮಾಧವ ಕುಲಕರ್ಣಿ ಅವರು ಈಗಿನ ಗದಗ ಜಿಲ್ಲೆ ಮತ್ತು ಆಗಿನ ಧಾರವಾಡ ಜಿಲ್ಲೆಯವರು. ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಪೂರೈಸಿರುವ ಅವರು ಹೈಸ್ಕೂಲು ಶಿಕ್ಷಣವನ್ನು ವಿದ್ಯಾದಾನ ಸಮಿತಿ ಹೈಸ್ಕೂಲು ಗದಗದಲ್ಲಿ ಪೂರ್ಣಗೊಳಿಸಿದ್ದಾರೆ. ತಂದೆ ಎ.ವಿ. ಕುಲಕರ್ಣಿ ಗದುಗಿನ ಮುನ್ಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಅಲ್ಲದೇ ಹೈಸ್ಕೂಲು ಶಿಕ್ಷಣದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಎಸ್.ಎಸ್. ಅಯ್ಯಂಗಾರ್ ಅವರ ಆಡಳಿತ ಕ್ರಮ ಮತ್ತು ಶಿಸ್ತು ನನ್ನ ಮೇಲೆ ಪ್ರಭಾವ ಬೀರಿದವು ಎನ್ನುತ್ತಾರೆ ಮಾಧವ ಕುಲಕರ್ಣಿ. ಗದುಗಿನ ಜೆ.ಟಿ. ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ 1968ರಲ್ಲಿ ಸ್ನಾತಕೋತ್ತರ ...
READ MORE