ವ್ಯಕ್ತಿ ಸಾಮರ್ಥ್ಯದಲ್ಲಿಯ ಟೊಳ್ಳುತನದ ಬೃಹತ್ ಕಥೆಯಾಗಿ, ಮಾನವನ ಸದಾಶಯಗಳ ಸುಂದರ ಕನಸಾಗಿ, ವೈಚಾರಿಕತೆಯ ಮಹಾ ಪ್ರಬಂಧವಾಗಿ ಮತ್ತು ಜೀವನ ಪ್ರೀತಿಯ ಆಗರವಾಗಿ ಓದುಗರ ಗಮನ ಸೆಳೆಯುವ ಕಾದಂಬರಿ-ವಿಕ್ರಮಾದಿತ್ಯ. ಮಾನವೀಯ ಸ್ಪಂದನವಿಲ್ಲದ ಧರ್ಮನಿಷ್ಠೆಯಿಂದಾಗಿ ಎಂಥ ಅನಾಹುತಕಾರಿ ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದರ ಸೂಚನೆ ನಮಗೆ ಕಾಣ ಸಿಗುತ್ತದೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE