ಮಂತ್ರೋತ್ಕರ್ಷ

Author : ಕೌಂಡಿನ್ಯ ನಾಗೇಶ

Pages 111




Year of Publication: 1998
Published by: ಸಾಹಿತ್ಯ ನಂದನ
Address: RJFH+W44, ಎಸ್. ಬಿಂಗಿಪುರ-560105 (ಕರ್ನಾಟಕ)

Synopsys

‘ಮಂತ್ರೋತ್ಕರ್ಷ’ ಎಂಬುದು ಕೌಂಡಿನ್ಯ (ಕೌಂಡಿನ್ಯ ನಾಗೇಶ) ಅವರ ಕಾದಂಬರಿ. ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದ್ದರೂ ಸಾಮಾನ್ಯ ಜನತೆ ಮಾಟ,ಮಂತ್ರ,ತಂತ್ರಗಳಿಗೆ ಮೊರೆ ಹೋಗುವುದು ನಿಂತಿಲ್ಲ. ಈ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಸಂಗತಿ ಎಂದರೆ-ಅವರೆಲ್ಲ ಮೂಢರೆ ಎಂಬುದು. ವಿಜ್ಞಾನದ ಅರಿವಿನಾಚೆಗೂ ಒಂದು ಶಕ್ತಿ ಇದೆ ಎಂಬುದರ ಸೂಚ್ಯ ಸುಳಿವು ಇದು. ಜನರ ಅರಿವಿಗೆ ನಿಲುಕುತ್ತಿರುವುದು ವಿಜ್ಞಾನದ ಕಣ್ಣಿಗೇಕೆ ಕಾಣುತ್ತಿಲ್ಲ ಎಂಬುದು ಈ ಗೊಂದಲಕ್ಕೆ- ಸಂಘರ್ಷಕ್ಕೆ ಕಾರಣ. ಮಾಟ-ಮಂತ್ರ-ತಂತ್ರ-ವಶೀಕರಣ ಹೀಗೆ ಅಗೋಚರ ಜಗತ್ತಿನ ವಿಷಯಗಳ ನಿರೂಪಣೆಯೊಂದಿಗೆ ಕಾದಂಬರಿಯು ಕುತೂಹಲ ಕೆರಳಿಸುತ್ತದೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books