‘ಅಣು’ ಲೇಖಕ ಕೇಶವರೆಡ್ಡಿ ಹಂದ್ರಾಳ ಅವರ ಕಾದಂಬರಿ. ಈ ಕೃತಿಗೆ ಡಾಕ್ಟರ್ ಚಂದ್ರಮ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. 'ಮುಂಬಯಿಯ ಧಾರಾವಿ ಕೊಳಗೇರಿ ಮತ್ತು ಸೆಕ್ಸ್ ದಂಧೆಯ ಕೇಂದ್ರವಾದ ಕಾಮಾಟಿಪುರವನ್ನು ಕೇಂದ್ರವನ್ನಾಗಿಟ್ಟುಕೊಂಡು ರಚಿಸಿರುವ ಈ ಕಾದಂಬರಿಯಲ್ಲಿ ಕೇಶವರೆಡ್ಡಿ ಹಂದ್ರಾಳರು ಇಲ್ಲಿ ವಾಸಿಸುವ ಜನರ ಬದುಕನ್ನು ಎದೆ ಝಲ್ಲೆನ್ನುವಷ್ಟರ ಮಟ್ಟಿಗೆ ತೆರೆದಿಟ್ಟಿದ್ದಾರೆ. ಚರಂಡಿಗಳಲ್ಲಿ ಖುಷಿಯಾಗಿ ಪಿಸುಗುಡುವ ಹುಳುಗಳಂತೆ ಇಲ್ಲಿನ ಮಾನವ ಜೀವಿಗಳು ಅತ್ಯಂತ ಸಂಕಷ್ಟಗಳಲ್ಲೂ ಸಂಭ್ರಮದಿಂದ ಬದುಕುವ ಪರಿಯನ್ನು ಕೇಶವರೆಡ್ಡಿ ಹಂದ್ರಾಳರು ಅನಾವರಣಗೊಳಿಸಿರುವ ಪರಿ ಬಲು ವಿಶಿಷ್ಟವಾಗಿದೆ' ಎನ್ನುತ್ತಾರೆ.
ಹಸಿವು ಮತ್ತು ಕಾಮಗಳೇ ಇಡೀ ಜೀವಸಂಕುಲದ ಅನಿವಾರ್ಯ ಮಹತ್ವದ ಸಂಗತಿಗಳೆಂಬುದನ್ನು ಕಾದಂಬರಿಕಾರರು ಬೆರಗಾಗುವಂತೆ ವಿಶ್ಲೇಷಿಸುತ್ತಾ, ವಾಸ್ತವದ ನೆಲೆಗಟ್ಟಿನಲ್ಲಿ ಹೇಗೆ ಹಸಿವು ಮತ್ತು ಕಾಮಗಳು ನೈತಿಕತೆಯ ಸುತ್ತಲೂ ಮನುಷ್ಯ ಹಾಕಿಕೊಂಡಿರುವ ಪರಿಮಿತಿಗಳನ್ನು ಯಾವ ಮುಲಾಜೂ ಇಲ್ಲದೆ ಕೆಡವಿ ಬಿಡುತ್ತವೆಂಬ ಸತ್ಯವನ್ನು ಮಾರ್ಮಿಕವಾಗಿ ಮತ್ತು ದೃಢವಾಗಿ ಪ್ರತಿಪಾದಿಸುವ ರೀತಿಯಂತೂ ಅನನ್ಯತೆಯನ್ನು ಪಡೆದುಕೊಂಡಿದೆ. ಜೀವಜಗತ್ತಿನಲ್ಲಿ ಸೃಷ್ಟಿಯಾಗಿ ಕಡೆಗೆ ಅವನತಿ ಕಾಣುವ ಮಾನವನಿಂದ ಹಿಡಿದು ಪ್ರತಿಯೊಂದು ಜೀವಿಯೂ ಖಂಡಿತವಾಗಿಯೂ ಪರಾವಲಂಬಿ ಎಂಬುದನ್ನು ಹಂದ್ರಾಳರು ಈ ಕಾದಂಬರಿಯಲ್ಲಿ ಅತ್ಯಂತ ತಾಳ್ಮೆಯಿಂದ ತಣ್ಣಗೆ ತೆರೆದಿಡುವ ಪರಿ ಬರವಣಿಗೆಗೇ ಒಂದು ಹೊಸ ಆಯಾಮವನ್ನು ಸೃಷ್ಟಿಸಿದಂತಿದೆ’ ಎಂದು ಡಾಕ್ಟರ್ ಚಂದ್ರಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಅನಕ್ಷರಸ್ಥರು . ಕೃಷಿ ಕೆಲಸಗಳನ್ನು ಮಾಡಿಕೊಂಡೇ ಹಂದ್ರಾಳದ ಪ್ರೈಮರಿ ಸ್ಕೂಲು , ಬ್ಯಾಲ್ಯದ ಮಿಡ್ಲಿಸ್ಕೂಲು ಪೂರೈಸಿದ್ದು . ತಾತ ನರಸಿಂಹರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯ ಊರೊಂದರ ಜಮೀನುದಾರ . ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಆ ಸೀಮೆಯ ಶೋಷಕ ಬ್ರಿಟಿಷ್ ಕಲೆಕ್ಟರ್ ನನ್ನು ಖೂನಿ ಮಾಡಿ ರಾತ್ರೋರಾತ್ರಿ ಕರ್ನಾಟಕದ ಕಡೆ ಪ್ರಯಾಣ . ಕಾಪು ರೆಡ್ಡಿಯಾಗಿದ್ದ ತಾತ ಮದುವೆಯಾಗಿದ್ದು ಕಮ್ಮ ಜಾತಿಯ ಅಜ್ಜಿಯನ್ನು . 1947 ...
READ MORE