ಲೇಖಕ ಪ್ರಕಾಶ್ ರಾಜ್ ಮೇಹು ಅವರ ಕಾದಂಬರಿ- ‘ತಿಮ್ಮಜ್ಜಿಯ ಮ್ಯಾಗ್ಲುಂಡಿ’. ಕೃತಿಗೆ ಬೆನ್ನುಡಿ ಬರೆದ ಹಿರಿಯ ಲೇಖಕಿ ವೈದೇಹಿ, ‘ಇದು ನಿಜವಾಗಿಯೂ ಗಮನಾರ್ಹ ಕೃತಿ, ಭಾಷೆ, ವಸ್ತು, ಕಾಳಜಿ, ವೈಚಾರಿಕತೆ ಎಲ್ಲವನ್ನೂ ಎರಕ ಹೊಯ್ದಂತೆ ಕಾದಂಬರಿಯ ರಚನೆಯಾಗಿದೆ. ಈ ಕಾದಂಬರಿಯ ಓದು ಒಂದು ಅನುಭವ ಓದಿದ ಮೇಲೆಯೂ ಉಳಿಯುವ ಅನುಭವ…’ ಎಂದು ಪ್ರಶಂಸಿದ್ಧಾರೆ. ರಾಜ್‌ಕುಮಾರ್, ಕೆ, ಮರುಳಸಿದ್ದಪ್ಪ, ಗಿರೀಶ್ ಕಾಸರವಳ್ಳಿ , ಎಚ್.ಎಸ್. ರಾಘವೇಂದ್ರರಾವ್ ಮತ್ತು ಬಂಜರೆಗೆ ಜಯಪ್ರಕಾಶ ಕೂಡ ಬೆನ್ನುಡಿ ಬರೆದು ಕೃತಿಯನ್ನು ಪ್ರಶಂಸಿದ್ದಾರೆ.
ಲೇಖಕ ಪ್ರಕಾಶರಾಜ್ ಮೇಹು ಮೂಲತಃ ಮೇಗಲ ಹುಂಡಿಯ ಚಾಮರಾಜನಗರ ತಾಲೂಕಿನವರು. ತಂದೆ ಪುಟ್ಟಸ್ವಾಮಿ ಗೌಡ. ತಾಯಿ ಸಾವಿತ್ರಮ್ಮ. ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ನೀನಾಸಂ ಪದವಿ ಪೂರೈಸಿದ್ದಾರೆ. ಟಿ ಎಸ್ ನಾಗಾಭರಣ, ಗಿರೀಶ್ ಕಾಸರವಳ್ಳಿ, ಸಿಂಗೀತಂ ಶ್ರೀನಿವಾಸರಾವ್, ಯೋಗರಾಜ್ ಭಟ್, ಮುಂತಾದವರ ಜೊತೆ ಸಹ- ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜಕುಮಾರ್ ಅವರ ವಜ್ರೇಶ್ವರಿ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಸಹ-ನಿರ್ದೇಶಕನಾಗಿ ಕೆಲಸಮಾಡಿದ್ದಾರೆ. "ಡಿ ಎನ್ ಎ" ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ. 2001 ರಲ್ಲಿ ಬರೆದ "ತಿಮ್ಮಜ್ಜಿಯ ಮ್ಯಾಗ್ಲುಂಡಿ" ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ...
READ MORE