ಒಡ್ಡು

Author : ನಾ. ಡಿಸೋಜ

Pages 122

₹ 118.00




Year of Publication: 1990
Published by: ಹೇಮಂತ ಸಾಹಿತ್ಯ
Address: ಹೇಮಂತ ಸಾಹಿತ್ಯ 53/1, ಕಾಟನ್‌ ಪೇಟೆ ಮುಖ್ಯ ರಸ್ತೆ,ಬೆಂಗಳೂರು- 560053
Phone: 9194484 67728

Synopsys

ಮುಳುಗಡೆ ಕುರಿತಂತೆ ಸಂಬಂಧಪಟ್ಟ ಮೂರು ಕಾದಂಬರಿಗಳಲ್ಲಿ ಒಡ್ಡು ಸಹ ಒಂದು. ಸಾಗರ ಪೇಟೆಯಿಂದ ಹಿಂತಿರುಗಿ ಬಂದ ಸುಬ್ರಾಯ ಹೆಗ್ಗಡೆರವರು ತಲಕಳಲೆ ಹತ್ರ ಹಳ್ಳಕ್ಕೆ ಒಡ್ಡು ಕಟ್ಟುತ್ತಾರೆ, ಅಲ್ಲಿ ಸುತ್ತಮುತ್ತಲಿರುವ ತಲಕಳಲೆ, ಹಾರೋಗದ್ದೆ, ದೊಂಬೆಕಲ್ಲು, ಕೂಡ್ಲಮನೆ, ನೀರ ಬಾಗಿಲು, ತೆಂಕೆಬೈಲು, ಕೇದಿಗೆಹಳ್ಳ, ಬಿದ್ರೋಡಿ ಮೊದಲು ಮುಳುಗಿ ನಂತರ ದೂರ ಇರೋ ಹಳ್ಳಿಗಳೂ ಮುಳುಗುತ್ತದೆಯೆಂಬ ಸುದ್ಧಿ ತರುತ್ತಾರೆ. ಎಷ್ಟೋ ವರ್ಷಗಳಿಂದ ಸರಕಾರದ ವಾಹನಗಳ ಓಡಾಟ, ಸಲಕರಣೆಗಳನ್ನು ಇರಿಸಿಕೊಂಡು ಗುರುತು ಮಾಡಿಕೊಳ್ಳುವುದನ್ನು ಹಳ್ಳಿಯವರು ಕಂಡಿದ್ದರು, ಆದರೆ ಒಡ್ಡು ಕಟ್ಟುವುದು ಖಚಿತವಾಯಿತೆಂದು ತಿಳಿದ ಹಳ್ಳಿಗರು ಸಂಕಟಪಟ್ಟರು, ಇನ್ನು ಏನೇನು ಅನುಭವಿಸಬೇಕೊ ಎಂದು ಬೇಸರಪಟ್ಟರು. ಬೇರೆ ಕಡೆ ಅರ್ಜಿ ಹಾಕಬಹುದು, ಹೊಲ ತೋಟ ಮನೆಗೆ ಪರಿಹಾರಕ್ಕೆ ಕೋರಿಕೆ ಸಲ್ಲಿಸಬಹುದು, ಕಡಿಮೆ ಎನಿಸಿದರೆ ದಾವಾ ಹಾಕಬಹುದು, ಆ ಯಾ ಹಳ್ಳಿ ಬಿಟ್ಟು ಬೇರೆ ಕಡೆ ಹೋಗಿ ನೆಲಸಬಹುದೆಂದು ಜನರು ಯೋಚಿಸತೊಡಗಿದರು. ಆದರೆ ಚಿತ್ರೋಡಿ ಏನಾಗಬಹುದೆಂದು ಯಾರಿಗೂ ತಿಳಿಯಲಿಲ್ಲ . ಚಿತ್ರೋಡಿ ಹನುಮಂತಪ್ಪನಿಗೆ ಇದೊಂದು ಯೋಚನೆಯಾಯಿತು. ತೋಟ ಮನೆ ಬಿಟ್ಟು ಹೋಗುವುದು ಕಷ್ಟ, ಹೊಸ ಜಾಗಕ್ಕೆ ಹೋಗಿ ಮೊದಲಿನಿಂದ ಎಲ್ಲವನ್ನೂ ಮಾಡುವುದು ಸುಲಭವಲ್ಲ, ಆದರೆ ತಮಗೆ ಬೇರೆ ದಾರಿಯಿಲ್ಲ, ಸರಕಾರ ಒಡ್ಡು ಕಟ್ಟುವುದಂತೂ ನಿಜ, ತಾವು ಹಳ್ಳಿ ಬಿಡಬೇಕಾಗಿರುವುದೂ ನಿಜ ಎಂದು ಜನಗಳು ಚರ್ಚಿಸತೊಡಗಿದರು.

About the Author

ನಾ. ಡಿಸೋಜ

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ...

READ MORE

Related Books