‘ಬದುಕಗೊಡದಜನ’ ಕೃತಿಯು ಹರಿಹರಪ್ರಿಯ ಅವರ ಕಾದಂಬರಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ನಿರಂಜನ ಅವರು, ‘ಬದುಕಗೊಡದಜನ’ ಇದೀಗ ಮುಗಿಸಿದೆ. ಸೂರೆಗೊಳ್ಳುವ ಕಲಾತ್ಮಕತೆ, ಜಾಗೃತ ವಿಚಾರಧಾರೆ, ನಿಮ್ಮಿಂದ ಇನ್ನೂ ಹೆಚ್ಚನ್ನು ನಿರೀಕ್ಷಿಸುವೆ ಎನ್ನುತ್ತಾರೆ. ಸಾಹಿತಿ ಬರಗೂರು ರಾಮಂದ್ರಪ್ಪ ಅವರು, ಅನುಭವ ಪ್ರಾಮಾಣ್ಯದ ದೃಷ್ಟಿಯಿಂದ ಬ್ರಾಹ್ಮಣಯುವಕನನ್ನು ನಾಯಕನನ್ನಾಗಿ ಮಾಡಿದ ಈ ಕೃತಿಯಲ್ಲಿ ಬ್ರಾಹ್ಮಣಪರ ಆಶಯಗಳಿಲ್ಲವೆಂಬುದು ಲೇಖಕರ ಬಗೆಗಿನ ವ್ಯಾಖ್ಯಾನವೂ ಆಗುತ್ತದೆ. ಹೀಗಾಗಿ ಬದುಕಗೊಡದಜನ ಶೀರ್ಷಿಕೆಯು ಹರಿಹರಪ್ರಿಯರ ಚಿಂತನಕ್ರಮದ ನೆಲೆಗಳನ್ನು ಧ್ವನಿಸುವ ಸಂಕೇತವೂ ಬರವಣಿಗೆಯ ಚಿಂತನ ಕೇಂದ್ರಗಳನ್ನು ಕಾಣುವ ದಿಕ್ಸೂಚಿಯೂ ಆಗುತ್ತದೆ ಎಂದಿದ್ದಾರೆ.
ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. ಮೈಸೂರಿನಲ್ಲಿ ಜನಿಸಿದ (ಜ. 1952) ಅವರು ಬೆಳೆದದ್ದು ಮಂಡ್ಯದಲ್ಲಿ. ಪ್ರೌಢಶಾಲೆಯವರೆಗೆ ಓದಿ ನಂತರ ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದ ಅವರು ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡದ ಗುರು ಎಂದು ಕೊಂಡ ಹಾಗೆ ತೆಲುಗಿನ ಮಹಾಕವಿ ಶ್ರೀಶ್ರೀ ಅವರು ಹೋರಾಟಕ್ಕೆ ಗುರು. ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ನಾನ್ ಅಕಾಡೆಮಿಕ್ ಚಳವಳಿಗಾರ, ಸಾಂಸ್ಕೃತಿಕ ರಾಯಭಾರಿ ಎಂದು ಹೆಸರು. ...
READ MORE