‘ಕೊಡಗಿನ ಲಿಂಗರಾಜ’ಬಿ. ಪ್ರಭಾಕರ ಶಿಶಿಲ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಕೊಡಗಿನ ಕೊನೆಯ ದೊರೆ ಚಿಕ್ಕವೀರ ರಾಜೇಂದ್ರನ ತಂದೆಯ ಕಥಾನಕ. ಕೊಡಗಿನ ಲಿಂಗರಾಜ ಕವಿ ಮತ್ತು ಗಾಯಕನಾಗಿದ್ದು ಧೀರೋದ್ದಾತ ನಾಯಕ. ಮನದೊಳಗೆ ಸಾಕಷ್ಟು ಕ್ರೌರ್ಯ ತುಂಬಿದ್ದ ರಾಜ. ತನ್ನ ವಿನಾಶಕ್ಕೆ ತಾನೇ ಕಾರಣನಾಗುತ್ತಾನೆ. ಇದು ಕೊಡಗಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಶಿಶಿಲರ ಮೂರನೆಯ ಕಾದಂಬರಿ. ಶಿಶಿಲ ಇದುವರೆಗೆ ಐವತ್ತನಾಲ್ಕು ಸಾಹಿತ್ಯ ಮತ್ತು ನೂರ ಎಪ್ಪತ್ತೈದು ಅರ್ಥಶಾಸ್ತ್ರ ಕೃತಿ ರಚಿಸಿದ್ದಾರೆ. ಇವರ ಪುಂಸ್ತ್ರೀ ಕಾದಂಬರಿ ಹದಿನಾಲ್ಕು ಭಾಷೆಗಳಿಗೆ ಮತ್ತು ಮತ್ತ್ಯಗಂಧಿ ಆರು ಭಾಷೆಗಳಿಗೆ ಅನುವಾದಗೊಳ್ಳುತ್ತಿದೆ. ಕನ್ನಡದ ಮಹತ್ವದ ಕಾದಂಬರಿಕಾರ, ಕತೆಗಾರ, ಪ್ರವಾಸಕಥನಕಾರ, ಅರ್ಥಶಾಸ್ತ್ರಜ್ಞ ಶಿಶಿಲ ಹವ್ಯಾಸಿ ನಾಟಕಕಾರ ಮತ್ತು ಯಕ್ಷಗಾನ ಕಲಾವಿದನಾಗಿ ತುಂಬಾ ಹೆಸರು ಗಳಿಸಿದ್ದಾರೆ.
ಲೇಖಕ ಡಾ. ಪ್ರಭಾಕರ ಶಿಶಿಲ ಅವರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯದತ್ತ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಅರ್ಥಶಾಸ್ತ್ರದ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ಕೃತಿಗಳು: ಮತ್ಸ್ಯಗಂಧಿ, ಗಗ್ಗರ, ಬಾರಣೆ, ಗುಜರಿ ಅದ್ದಿಲಿಚ್ಚನ ಜಿಹಾದಿಯ, ಕೊಡಗಿನ ಐತಿಹ್ಯ ಕಥೆಗಳು, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕತೆಗಳು, ಜಲಲ ಜಲಧಾರೆ, ದೊಡ್ಡ ವೀರ ರಾಜೇಂದ್ರ, ಕೊಡಗಿನ ಕತೆಗಳು. ಶಿಶಿಲರನ್ನೇ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ . ಸುವರ್ಣ ಅಭಿನಂದನಾ ಸ್ಮರಣಿಕೆ, ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ, ಶಿಶಿಲರ ಜೀವನ ಮತ್ತು ಸಾಧನೆಗಳು, ಪ್ರಭಾಕರ ಶಿಶಿಲರ ಸಾಹಿತ್ಯ ಕುರಿತು ಡಾ. ಮೋಹನ ಕುಮಾರ ...
READ MORE