ಸಾಹಿತಿ, ಪತ್ರಕರ್ತ ಲಂಕೇಶರ ’ಅಕ್ಕ’ ಕೊಳೆಗೇರಿಯ ಮುಗ್ಧ ಹುಡುಗನೊಬ್ಬ ನಗರದ ಸಂಕೀರ್ಣ ಬದುಕನ್ನು ನೋಡುವ ಬಗೆ. ಲಂಕೇಶರೇ ಒಂದೆಡೆ ಹೇಳಿದಂತೆ ಚುನಾವಣಾ ವರದಿಗಾಗಿ ಬೆಂಗಳೂರಿನ ಕೊಳೆಗೇರಿಯೊಂದರಲ್ಲಿ ಅಲೆಯುತ್ತಿದ್ದಾಗ ಹೊಳೆದ ಕೃತಿ ಇದು.
ಅವರ ’ಮುಸ್ಸಂಜೆಯ ಕಥಾ ಪ್ರಸಂಗ’, ’ಬಿರುಕು’ ಕಾದಂಬರಿಗಳಿಗಿಂತಲೂ ಭಿನ್ನವಾದ ವಸ್ತುವೊಂದನ್ನು ಅಕ್ಕ ಒಳಗೊಂಡಿದೆ. ಇಲ್ಲಿನ ಪಾತ್ರಗಳಾದ ’ದೇವೀರಿ’, ’ಕ್ಯಾತ’ನ ಬದುಕಿನ ಮೇಲೆ ರಾಜಕಾರಣ, ವ್ಯವಸ್ಥೆ ಮಾಡುವ ದಾಳಿಯನ್ನೂ ಕೃತಿ ಪರಿಣಾಮಕಾರಿಯಾಗಿ ಚರ್ಚಿಸುತ್ತದೆ.
ಇದೇ ಕಾದಂಬರಿಯನ್ನು ಆಧರಿಸಿ ಕವಿತಾ ಲಂಕೇಶ್ ಅವರ ನಿರ್ದೇಶನದಲ್ಲಿ ’ದೇವಿರಿ’ ಸಿನಿಮಾ ಮೂಡಿ ಬಂತು. ಪ್ರಥಮ ಅತ್ಯುತ್ತಮ ಚಲನಚಿತ್ರ ಎಂದು ರಾಜ್ಯ ಪ್ರಶಸ್ತಿ, ಅರವಿಂದನ್ ಪುರಸ್ಕಾರ ಸೇರಿದಂತೆ ಸುಮಾರು ಆರು ಪ್ರಶಸ್ತಿಗಳಿಗೆ ಇದು ಪಾತ್ರವಾಗಿದೆ.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE