ಸಾಧನೆಯ ಸುಗ್ಗಿ

Author : ನಾಗರಾಜು ಕೆಂಪಯ್ಯ

Pages 188

₹ 200.00




Year of Publication: 2024
Published by: ಪುರು ಪ್ರಕಾಶನ
Address: ಪುರು ಪ್ರಕಾಶನ ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
Phone: 8660647720

Synopsys

‘ಸಾಧನೆಯ ಸು‌ಗ್ಗಿ’ ನಾಗರಾಜು ಕೆಂಪಯ್ಯ ಅವರ ಕಾದಂಬರಿ. ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಜನಿಸಿದ ವ್ಯಕ್ತಿಯೋರ್ವನ ಜೀವನದ ಕಥೆ ಇಲ್ಲಿದೆ. ಆ ಹುಡುಗನ ಜೀವನ ವೃತ್ತಾಂತದ ಏಳು ಬೀಳುಗಳನ್ನು ಈ ಕೃತಿಯು ಒಳಗೊಂಡಿದೆ. ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಊರ ಗೌಡರ ಮನೆಯ ಜೀತದಾಳಾಗಿ ದುಡಿಯುವ ಸಂತೋಷ ತನ್‌ನ ಸುತ್ತಲಿನ ವಿರೋಧಗಳನ್ನು ಎದುರಿಸುತ್ತಲೇ ಜೀವನವನ್ನು ರೂಪಿಸಿಕೊಳ್ಳುವ ಪರಿ ಇಲ್ಲಿ ವಿಶಿಷ್ಟವಾಗಿ ಮೂಡಿದೆ. ದ್ವೇಷ, ಅಸೂಯೆ, ಅಸಹಿಷ್ಣತೆ- ಇವೆಲ್ಲದರ ಮಧ್ಯೆ ಗಂಡು ಹೆಣ್ಣಿನ ಪ್ರೀತಿ ಇದೆ. ಹದಿಹರೆಯದ ಆಕರ್ಷಣೆ, ನಿಸ್ವಾರ್ಥವಾದ ಸ್ನೇಹ, ಬೆಂಕಿ ಹಾಯುವ ಸ್ಪರ್ಧೆ, ಕಬಡ್ಡಿ ಸ್ಪರ್ಧೆ, ಸ್ಪರ್ಧಾತ್ಮಕ ಪರೀಕ್ಷೆಯ ಸ್ಪರ್ಧೆಗಳೊಟ್ಟಿಗೆ ಜಾತಿ, ಮೇಲುಕೀಳು, ಬಡವ ಶ್ರೀಮಂತ ಎಂಬ ಸಮಾಜೋ- ಆರ್ಥಿಕ ಸ್ಪರ್ಧೆಗಳೂ ಕಂಡುಬರುತ್ತವೆ.

About the Author

ನಾಗರಾಜು ಕೆಂಪಯ್ಯ

ನಾಗರಾಜು ಕೆಂಪಯ್ಯ ಅವರು ಬೆಂಗಳೂರು ದಕ್ಷಿಣ ಮೂಲದ ಅಜ್ಜನಹಳ್ಳಿಯವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಸಾಧನೆಯ ಸುಗ್ಗಿ ಅವರ ಚೊಚ್ಚಲ ಕಾದಂಬರಿಯಾಗಿದೆ. ...

READ MORE

Related Books