‘ಮಳೆಯಲ್ಲಿ ಬಂದ ಅಪ್ಸರೆ’ ಲೇಖಕಿ ವಿಜಯಲಕ್ಷ್ಮೀ ಸತ್ಯಮೂರ್ತಿ ಅವರ ವಿಭಿನ್ನ ಶೈಲಿಯ ಕಾದಂಬರಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಲಕ್ಷ್ಮಣ ಕೌಂಟೆ ಅವರು, ಕಾದಂಬರಿಯೊಂದು ಮನೋರಂಗಭೂಮಿ. ಓದುಗರ ಮನೋಭೂಮಿಯಲ್ಲಿ ಅದರಲ್ಲಿನ ಪಾತ್ರಗಳು ಕಣ್ಣಿಗೆ ಕಟ್ಟಿದಂತೆ ಸಹಜವಾಗಿ ಭಾವ ಪೂರ್ಣವಾಗಿ ಚಿತ್ರಾವಳಿ ರೂಪದಲ್ಲಿ ತೋರಬೇಕಾಗುತ್ತವೆ. ಓದುಗರಲ್ಲಿ ಆ ಪಾತ್ರಗಳ ನಿಯತಿಗೆ ತಕ್ಕಂತೆ ಭಾವಗಳು ಸ್ಫುರಿಸಬೇಕಾಗುತ್ತದೆ. ವಿಜಯಲಕ್ಷ್ಮೀ ಸತ್ಯಮೂರ್ತಿಯವರ ಈ ಕಾದಂಬರಿಯಲ್ಲಿ ಅಂಥ ರಸಾನುಭಾವ ವ್ಯಕ್ತವಾಗುತ್ತದೆ. ವಿಜಯಲಕ್ಷ್ಮಿಯವರ ಬರಹದಲ್ಲಿ ಲಾಲಿತ್ಯ ಆಕರ್ಷಣೆ ಎರಡೂ ಇವೆ. ಪದಗಳನ್ನು ದುಂದು ವ್ಯಯ ಮಾಡದೇ ಹೇಳಬೇಕಿರುವುದನ್ನು ಮನ ಮುಟ್ಟುವ ಹಾಗೆ ಬರೆಯುವ ಕಲೆ ಅವರಿಗೆ ಸಿದ್ಧಿಸಿದೆ. ಕ್ಲಿಷ್ಟವಾದ, ಮಹಿಳೆಯರು ಬರೆಯಲು ಹಿಂಜರಿಯುವ ಕೆಲ ವಿಷಯಗಳನ್ನು ನಿರ್ಭಯವಾಗಿ ಸಶಕ್ತವಾಗಿ ಈ ಕಾದಂಬರಿಯಲ್ಲಿ ಬಳಸಿಕೊಂಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ವಿಜಯಲಕ್ಷ್ಮಿ ಸತ್ಯಮೂರ್ತಿ ಮೂಲತಃ ಬೆಂಗಳೂರಿನವರು. ತಂದೆ ಶ್ರೀನಿವಾಸ ಮೂರ್ತಿ.ತಾಯಿ ಯಶೋದ.ಪತಿ ಸತ್ಯಮೂರ್ತಿ. ಚಾಮರಾಜಪೇಟೆಯ ಶ್ರೀರಾಮ ಶಿಶುವಿಹಾರ, ಮಾಧವ ಕೃಷ್ಣಯ್ಯ ಬಾಲಕಿಯರ ಪ್ರೌಢ ಶಾಲೆ ಹಾಗೂ ಚಾಮರಾಜಪೇಟೆ ಜೂನಿಯರ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಇವರ 'ನವಮಿ' ಕಥಾಸಂಕಲನ ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನ ಎರಡನೇ ಸೆಮಿಸ್ಟರ್ ಡಿಗ್ರಿ ತರಗತಿಗೆ ಪಠ್ಯವಾಗಿದೆ. ಬಸವ ವಿಭೂಷಣ ಪ್ರಶಸ್ತಿ,ಬಸವ ರತ್ನ ಪ್ರಶಸ್ತಿ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಕೆ ಎಸ್ ನ ಕಾವ್ಯ ಪುರಸ್ಕಾರ ಇವರು ಪಡೆದಿರುವ ಪ್ರಶಸ್ತಿಗಳು . ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. 'ಋತುಗಾನ'ಎಂಬ ಸಾಹಿತ್ಯ ಮತ್ತು ...
READ MORE