ಎ.ಪಿ. ಮಾಲತಿ ಅವರು ಬರೆದ ಸಾಮಾಜಿಕ ಕಾದಂಬರಿ-ಅರ್ಧಾಂಗಿ. ಕೃತಿಯ ಮುನ್ನುಡಿಯಲ್ಲಿ ಸಾಹಿತಿ ಎಚ್‌ಎಸ್ಕೆ ಅಭಿಪ್ರಾಪಟ್ಟಿರುವಂತೆ ’ಈ ಕಾದಂಬರಿಯಲ್ಲಿ ಮೆಚ್ಚತಕ್ಕ ಅಂಶವೆಂದರೆ-ಸರಳ ನಿರೂಪಣೆ ಹಾಗೂ ಪಾತ್ರ ಪೋಷಣೆ. ಮನೋವಿಶ್ಲೇಷಣಾತ್ಮಕವಾಗಿ ಪಾತ್ರ-ಸನ್ನಿವೇಶಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಕಥೆ ನಡೆಯುವುದು ಪುತ್ತೂರಿನ ಹತ್ತಿರವೇ. ಭಾಷೆ ಸಹ ಅಲ್ಲಿಯದೇ. ಲೇಖಕಿಯ ಪರಿಚಿತ ಸೀಮೆಯಲ್ಲಿಯೇ ಕಾದಂಬರಿ ವಸ್ತು ಸುತ್ತುತ್ತದೆ. ಕಥೆ ನೇರವಾಗಿ ವಿಕಾಸಗೊಂಡು ನಡೆಯುತ್ತದೆ. ಹೆಣ್ಣಿನ ಕಣ್ಣಿನಿಂದ ಕಂಡಿದ್ದನ್ನು ಹಾಗೂ ಕಂಡಷ್ಟನ್ನು ಲೇಖಕಿಯು ಸರಳವಾಗಿಯೂ ಶಕ್ತವಾಗಿಯೂ ನಿರೂಪಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE