ತಪಸ್ವಿನಿ ಮಹಾಶ್ವೇತೆ

Author : ಪಿ.ಎಸ್. ರಾಮಾನುಜಂ

Pages 272

₹ 120.00




Year of Publication: 2011
Published by: ಲೋಕ ಶಿಕ್ಷಣ ಟ್ರಸ್ಟ್
Address: ಬೆಂಗಳೂರು-ಹುಬ್ಬಳ್ಳಿ

Synopsys

‘ತಪಸ್ವಿನಿ ಮಹಾಶ್ವೇತೆ’ ಪಿ.ಎಸ್. ರಾಮಾನುಜಂ ಅವರ ಕಾದಂಬರಿ.ಬಾಣಭಟ್ಟನ ಮಹೋನ್ನತ ಗದ್ಯಕಾವ್ಯವಾದ ಕಾದಂಬರಿಯನ್ನು ಕನ್ನಡದಲ್ಲಿ ಅನುಕಥನ ಎನ್ನುವ ರೀತಿಯಲ್ಲಿ ಈ ಕೃತಿ ರಚಿತವಾಗಿದೆ. ಕಾದಂಬರಿಯ ಮೂಲ ಕತೆಗೆ ಧಕ್ಕೆ ಬರದಂತೆ ಅದರ ಘಟನೆಯನ್ನು ಸನ್ನಿವೇಶಕ್ಕೆ ತಕ್ಕಂತೆ ವಿಸ್ತರಿಸುತ್ತಾ ಅವುಗಳನ್ನು ಪ್ರಸ್ತುತೀಕರಿಸುತ್ತಾ ಅಲ್ಲಲ್ಲಿ ಕೆಲವು ಸಾಮಾಜಿಕ ಘಟನೆಗಳನ್ನು ಸೇರಿಸಿಕೊಂಡು ಓದಿಸಿಕೊಂಡು ಹೋಗುವ ಶೈಲಿಯಲ್ಲಿ ಕಾದಂಬರಿಯ ಪುನರ್ ಸೃಷ್ಟಿಯಾಗಿದೆ. 

ಮೂಲ ಕಾದಂಬರಿಯಲ್ಲಿ ಪುಟಗಟ್ಟಲೆ ಓಡುವ ವಾಕ್ಯಸಮೂಹಗಳೇ ಇವೆ. ಅಲ್ಲಿರುವ ವರ್ಣನೆಗಳಲ್ಲಿರುವ ಸಮಸ್ತಪದಗಳ ನೀಳ ಅಚ್ಚರಿಗೊಳಿಸುವುದಲ್ಲದೆ ಭ್ರಮಿಸುವಂತೆ ಮಾಡುತ್ತವೆ. ಆ ಶೈಲಿಯು ಅದನ್ನು ಕಾವ್ಯವನ್ನಾಗಿ, ರಸಪ್ರವಾಹವನ್ನಾಗಿ ಮಾಡಿದೆ. ಲೇಖಕರು ಆ ರಸಮಯ ವರ್ಣನೆಗಳ ಪ್ರಪಂಚವನ್ನು ಕನ್ನಡದ ಓದುಗರ ಮುಂದೆ ಅನಾವರಣಗೊಳಿಸಲು ಒಂದು ತಂತ್ರ ಬಳಸಿದ್ದಾರೆ. ಅವುಗಳನ್ನು ಆಯಾ ಸನ್ನಿವೇಶದ ಪಾತ್ರಗಳು ಹೇಳುವ ವರ್ಣನೆಗಳಂತೆಯೂ, ಹಲವೆಡೆ ಕವಿಯು ನೇರವಾಗಿ ಹೇಳುವ ವರ್ಣನೆಗಳಂತೆಯೂ ಮಾಡಿ ಕಥಾಭಾಗಗಳಲ್ಲಿ ಅವುಗಳು ಹರಡಿವೆ. ಇದರಿಂದ ಅವು ಸಹಜವೆಂಬಂತೆ ಕಥೆಯ ಭಾಗಗಳಾಗಿ ಹರಿದು ಬಂದಿವೆ. ವಿರಹ-ಪ್ರೇಮಗಳ ಮಹಾಪೂರವೇ ಈ ಕಾದಂಬರಿಯಾಗಿದೆ.

About the Author

ಪಿ.ಎಸ್. ರಾಮಾನುಜಂ
(16 October 1941)

ಪಿ.ಎಸ್. ರಾಮಾನುಜಂ ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ IPS ಅಧಿಕಾರಿಗಳಾಗಿದ್ದು ಎಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲಿಸ್ (ADGP) ಆಗಿ ಕಾರ್ಯನಿರ್ವಹಿಸಿ 2001ರಲ್ಲಿ ನಿವೃತ್ತರಾದರು. ಸಾಹಿತ್ಯ, ಆಡಳಿತ ಎರಡನ್ನೂ ಸಮರ್ಥವಾಗಿ ನಿರ್ವಹಿಸಿದ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಬೇಡಮೂಡಲು ಗ್ರಾಮ. ತಂದೆ ಪ್ರತಿವಾದಿ ಭಯಂಕರ ಎಂದೇ ಬಿರುದಾಂಕಿತರಾಗಿದ್ದ ಸಂಪತ್ ಕುಮಾರ ಆಚಾರ್ಯ, ತಾಯಿ ಇಂದಿರಮ್ಮ. ಆರಂಭಿಕ ಶಿಕ್ಷಣ ಹರದನಹಳ್ಳಿ, ಚಾಮರಾಜನಗರದಲ್ಲಿ ಪೂರ್ಣಗೊಳಿಸಿದ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ(ಆನರ್ಸ್) ಪದವಿ ಪಡೆದರು,ಆನಂತರ ಕನ್ನಡ ಪಂಡಿತ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್, ಎಂ.ಎ ಪ್ರಥಮ ರ್ಯಾಂಕ್ ಸೇರಿದಂತೆ ಐದು ಚಿನ್ನದ ...

READ MORE

Related Books