ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ‘ಗಾಂಧಿ ಬಂದ’ ಕೃತಿಗೆ ಇತರ ಪ್ರಶಸ್ತಿ ಸಂದಿರುವುದು ಕೃತಿಯ ವಿಶಿಷ್ಟತೆಗೆ ಸಾಕ್ಷಿ. ಕೃತಿಯು ಈಗಾಗಲೇ ಐದು ಮುದ್ರಣಗಳನ್ನು ಕಂಡಿದೆ. ಈ ಕಾದಂಬರಿಗೆ ಬೆನ್ನುಡಿ ಬರೆದಿರುವ ಲೇಖಕಿ ಎಂ.ಎಸ್.ಆಶಾದೇವಿ ಅವರು ‘ಅಗೋಚರ ನೆಲೆಯೊಂದರಲ್ಲಿ ಗಾಂಧಿ ಎನ್ನುವ ಪ್ರಜ್ಞಾಪ್ರವಾಹ ಕುರುಹುಗಳನ್ನು ಅನಾಯಾಸವಾಗಿ ಹಿಡಿದಿರುವ ಈ ಕೃತಿ ಕನ್ನಡದ ಅಸಾಧಾರಣ ಪ್ರಯತ್ನಗಳಲ್ಲೊಂದು. ಗಾಂಧಿಯನ್ನು ಈ ಕಾದಂಬರಿ ಹೊರಗಿನಿಂದ ಮುಖಾಮುಖಿ ಆಗುವುದಿಲ್ಲ. ಬೇಕಾಗಿ ಬೇಡವಾಗಿ ಪಲ್ಲಟಗಳನ್ನು ಎದುರಿಸಲೇಬೇಕಾದ ಮಾನವ ನಾಗರಿಕತೆಯ ಅನಿವಾರ್ಯತೆಯ ಘಳಿಗೆಗಳಲ್ಲಿ ಈ ಕಾದಂಬರಿ ನಮ್ಮನ್ನು ಎದುರಾಗುತ್ತದೆ. 'ಗಾಂಧಿ ಬಂದ’ ನಿಜ; ಆದರೆ ಹೊರಗಿನಿಂದಲ್ಲ ನಮ್ಮೊಳಗಿನಿಂದಲೇ ಹುಟ್ಟಿದ ಹಾಗೆ ಈ ಕಾದಂಬರಿ ಕಾಣಿಸುತ್ತದೆ.
ಎಚ್. ನಾಗವೇಣಿಯವರು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಹೊನ್ನಕಟ್ಟೆಯಲ್ಲಿ 29-11-1962 ರಂದು ಜನಿಸಿದರು. ಕರಾವಳಿಯ ಸಾಂಸ್ಕೃತಿಕ ವಿಭಿನ್ನತೆಯ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳನ್ನು ಶೋಧಿಸುವ ಉತ್ತಮ ಕಥೆಗಳನ್ನು ನೀಡುತ್ತ ಡಾ. ಎಚ್. ನಾಗವೇಣಿ ಸಾಹಿತ್ಯಲೋಕದ ಗಮನ ಸೆಳೆದಿದ್ದಾರೆ. ವಿಜ್ಞಾನ, ಗ್ರಂಥಾಲಯ ವಿಜ್ಞಾನ, ಸಾಹಿತ್ಯ ಮತ್ತು ಶಿಕ್ಷಣ ಇವೆಲ್ಲದರಲ್ಲಿ ಪದವಿಗಳನ್ನು ಪಡೆದಿರುವ ಅವರು, ಈಗ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು- ನಾಲ್ಕನೇ ನೀರು, ಮೀಯುವ ಆಟ, ಕಡಲು, ವಸುಂಧರೆಯ ಗ್ಯಾನ, ಸೂರ್ಯನಿಗೊಂದು ವೀಳ್ಯ (ಕಥಾ ಸಂಕಲನಗಳು), ಗಾಂಧಿ ...
READ MORE