ಲೇಖಕ ಕೆ. ರಾಮಯ್ಯ ರೈ ಅವರ ಆಂಗ್ಲ ಕೃತಿಯನ್ನು ಲೇಖಕ ಕೆದಂಬಾಡಿ ಜತ್ತಪ್ಪ ರೈ ಅವರು ಕನ್ನಡಕ್ಕೆ ಅನುವಾದಿಸಿದ ಕಾದಂಬರಿ. ಪೊಲೀಸ್ ವ್ಯವಸ್ಥೆಯು ನಾವೇ ಮಾಡಿಕೊಂಡದ್ದು. ಅದು ಸಮಾಜದ ಆರೋಗ್ಯವನ್ನು ಕಾಪಾಡಲಿ ಎಂಬುದು ಅದರ ಉದ್ದೇಶ. ಆದರೆ, ಪೊಲೀಸರು ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ವರ್ತಿಸಿದರೆ ಹೇಗೆ? ತಮ್ಮ ಉದ್ದೇಶಕ್ಕೆ ಬದ್ಧರಾದರೆ ಮಾತ್ರ ಸಮಾಜದಿಂದ ಪೊಲೀಸರಿಗೆ ಗೌರವ ಸಿಕ್ಕೇ ಸಿಗುತ್ತದೆ. ತಪ್ಪಿದರೆ, ಅವರು ಗೌರವ ಕಳೆದುಕೊಳ್ಳುತ್ತಾರೆ. ಈ ಕಾದಂಬರಿಯ ನಾಯಕ ಕೆ. ರಾಮಯ್ಯ ರೈ. ಇವರು ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿ. ರಾಮಯ್ಯ ಅವರು ಸ್ವತಃ ಲೇಖಕರು. ತಮ್ಮ ಸ್ವ- ಅನುಭವವನ್ನೇ ಕೇಂದ್ರೀಕರಿಸಿ ಕಾದಂಬರಿ ಹೆಣೆದಿದ್ದರಿಂದ ಇದು ಆತ್ಮಕತೆಯೂ ಆಗಿದೆ.
ತುಳು ಸಾಹಿತ್ಯದ ಹೆಸರಾಂತ ಕವಿ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಪುತ್ತೂರು ತಾಲ್ಲೂಕಿನ ಕೆದಂಬಾಡಿಯಲ್ಲಿನ 1916ರಲ್ಲಿ ಜನಿಸಿದರು. ತುಳು ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಪಾರ ಸೇವೆ ಸಲ್ಲಿಸಿದವರು. ತುಳುತ್ತ ಪೋರ್ಲು ಅಜ್ಜಬಿರು (ನಾಟಕಗಳು), ಕುಜಿಲೆ ಪೂಜೆ (ಮೂಲ ಡಿ. ವಿ. ಜಿ. ಕನ್ನಡೊಗು ಕಣತ್ತಿನ ಉಮರ್ ಖಯ್ಯಾಮನ ರುಬಾಯತ್) ಅಸೆನಿಯಾಗೊ ಕಾಂತಗ ಜೋಗಿ (ಮೂಲ ಆಂಗ್ಲ ಕವಿ ಬ್ರೌನಿಂಗ್‌ನನ ದಿ ಪೈಪರ್ ಬೊಕ್ಕ ಕುವೆಂಪು ಅವರ ಕಿಂದರ ಜೋಗಿ). ಕೃಷಿಕರಾಗಿ, ಕೃಷಿಯ ರಕ್ಷಣೆಗಾಗಿ ಅನಿವಾರ್ಯವಾಗಿ ಬೇಟೆಗಾರರಾಗಿ, ತಮ್ಮ ಅರುವತ್ತನೆಯ ವಯೋಮಾನದಲ್ಲಿ ಅದೇ ಬೇಟೆಯ ನೆನಪುಗಳನ್ನು ಅಕ್ಷರಕ್ಕೆ ...
READ MORE