‘ಆಂದೋಲನ’ ಲೇಖಕ ಲಕ್ಷ್ಮಣ್ ಕೌಂಟಿ ಅವರ ಕಾದಂಬರಿ. ನಿಜಾಮನ ಆಡಳಿತ ಭಾಷೆ ಉರ್ದುವಾದ ಕಾರಣದಿಂದಾಗಿ ಜನಭಾಷೆ ಕನ್ನಡ ದಿಕ್ಕೆಟ್ಟು ಹೋಗಿತ್ತು. ಕಲಿತವರೆಲ್ಲ ಉರ್ದು ಭಾಷೆಯಲ್ಲಿ ಕಲಿತಿದ್ದರಾದ್ದರಿಂದ ಕನ್ನಡದ ಬರಹಗಾರರೇ ಇರಲಿಲ್ಲ. ಬರೆಯಬೇಕು ಯಾರು? ಜನಪದರು ಹಾಡು ಕಟ್ಟಿ ಹಾಡಿದರು.
ಡಾ. ಲಕ್ಷ್ಮಣ ಕೌಂಟೆ ಅವರು ತಮ್ಮ ಕಾದಂಬರಿ 'ಆಂದೋಲನಕ್ಕೆ' ಹೂರಣ ಮಾಡಿಕೊಂಡಿದ್ದಾರೆ. ಬೃಹತ್ ಕ್ಯಾನವಾಸ್ ಮೇಲೆ ಇಲ್ಲಿ ಕಾದಂಬರಿಯ ಕುಂಚ ಸಂಚರಿಸುತ್ತದೆ. ನಿಜಾಮ ಸಂಸ್ಥಾನದಿಂದ ಬಿಡುಗಡೆ ಹೊಂದಿ ಭಾರತ ಒಕ್ಕೂಟದಲ್ಲಿ ಸೇರ ಬಯಸುವ ಹೋರಾಟ ಅನೇಕ ಸಂಘಟನೆಗಳ ಮೂಲಕ ನಡೆಯುತ್ತದೆ-ಆರ್ಯ ಸಮಾಜ, ನಿಜಾಂ ಪ್ರಾಂತೀಯ ವೀರಶೈವ ಪರಿಷತ್ತು, ಹೈದ್ರಾಬಾದ ಸಂಸ್ಥಾನ ಕಾಂಗ್ರೆಸ್, ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಮಂದಿರ ಹೀಗೆ ಹಲವು ಸಾವಿರ ಎಕರೆ ಜಮೀನು ಹೊಂದಿದ ಜಮೀನುದಾರರ ದಬ್ಬಾಳಿಕೆ ಹಾಗೂ ಶೋಷಣೆಗೆ ಒಳಗಾದವರು ಅಲ್ಲಿನ ರೈತರು, ಕೃಷಿ ಕಾರ್ಮಿಕರು, ನಿಜಾಮ ಆಡಳಿತದೊಂದಿಗಿನ ಸಖ್ಯದಿಂದಲೇ ಇವರು ಶ್ರಮಿಕರ ರಕ್ತ ಹೀರುವವರು. ಜಮೀನುದಾರರ ಶೋಷಣೆಯಿಂದ ಮುಕ್ತಿಗಾಗಿ ಕಮ್ಯುನಿಷ್ಟರ ಹೋರಾಟದ ಅದ್ಭುತ ಗಾಥೆ ತೆಲಂಗಾಣದ್ದು. 'ಸಂಘಂ'ಗಳ ಮೂಲಕ ಈ ಹೋರಾಟ ನಡೆದಿತ್ತು. ಆ ಹೋರಾಟದ ಕತೆಯನ್ನು ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE