ತೆಲುಗು ಕಾದಂಬರಿಕಾರ ಹಾಗೂ ಪ್ರೇರಣಾತ್ಮಕ ಲೇಖನಗಳ ಬರಹಗಾರ ಯಂಡಮೂರಿ ವೀರೇಂದ್ರನಾಥ ಅವರ ಕಾದಂಬರಿ-ಪರಿಮಳ. ಒಂದು ವಸ್ತುವನ್ನು ಸಾಂಪ್ರದಾಯಿಕ ನೋಟದಿಂದ ನೋಡದೇ ವಿಭಿನ್ನವಾಗಿ ನೋಡುವ ಲೇಖಕರ ದೃಷ್ಟಿಕೋನವು ಓದುಗರನ್ನು ಸೆಳೆದು, ಅವರದ್ದೇ ಆದ ಓದುಗರ ವರ್ಗವನ್ನು ಹೊಂದಿದ್ದಾರೆ. ಅವರ ಕಥಾ ನಿರೂಪಣಾ ಶೈಲಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE