‘ಚರ್ಮಾಯಿ’ ಲೇಖಕ ಅಡ್ಲೂರು ರಾಜು ಅಷ್ಟೇ ಅವರ ಕಾದಂಬರಿ. ಬಾಹ್ಯ ಸಮಾಜದ ಮೇಲಿನ ಚರ್ಮದ ಹೊದಿಕೆ, ಅದರೊಳಗೊಂಡಿರುವ ಮಾನವೀಯ ಒಳ ಅಂತಹಕರಣದ ಜೊತೆ ಜೊತೆಗೆ ಪ್ರವಹಿಸುತ್ತಿರುವ ಸಮಾನತೆಯ ನೆತ್ತರು ಒಂದೇ ಎನ್ನುವುದು ಜಾಗತಿಕ ಸತ್ಯವಾದರೂ, ಅದನ್ನು ಮರೆಮಾಚಿ ಅದರ ಚರ್ಮಕ್ಕೆ ಗೊತ್ತು -ಸಂಪ್ರದಾಯಗಳ ಗಾಳಿ ಮತ್ತು ಕ್ರೌರ್ಯದ ಆಚರಣೆಗಳು ಸವರಿ ಚರ್ಮದ ನೈj ಸತ್ಯವನ್ನು ಮರೆಮಾಚುತ್ತಲೆ ಇರುತ್ತವೆ. ಇದು ಚರಿತ್ರೆಯ ಉದ್ದಕ್ಕೂ ಹರಿದು ಬಂದಿರುವ ಮನಸ್ಥಿತಿಗಳ ಘರ್ಷಣೆಯಾಗಿದೆ. ಸಿಗದ ಗಾಳಿಯ ರೂಪ ಮತ್ತು ಕಾಣದ ಮುಖವಾಡಗಳ ಅನಾವರಣವೇ ಚರ್ಮಾಯಿ.
ಅಡ್ಲೂರು ರಾಜು ಅಷ್ಟೆ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದವರು. ಎಂಜಿನಿಯರಿಂಗ್ ಪದವೀಧರರು. ಜೊತೆಗೆ ಸಾಹಿತ್ಯದ ಆಸಕ್ತಿ. ಅವರ ಮೊದಲ ಕವನ ಸಂಕಲನ ‘ಮಾಗಿಯ ಹನಿಗಳು’ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರಿಗೆ ಕೊಡುವ ಪ್ರೋತ್ಸಾಹ ಧನ ಪಡೆದು 2015ರಲ್ಲಿ ಬಿಡುಗಡೆಯಾಯಿತು. ಅವರ ಮೊದಲ ಕಾದಂಬರಿ ‘ಚರ್ಮಾಯಿ’ 2017ರಲ್ಲಿ ಬಿಡುಗಡೆಗೊಂಡಿದ್ದು, ಮತ್ತೊಂದು ಕಾದಂಬರಿ ‘ಇಂದಿರಾ ಬೇಡಿ- 2023’ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಕನ್ನಡ ಸುದ್ದಿ ಮಾಧ್ಯಮದಲ್ಲಿ ತಾಂತ್ರಿಕ ಎಂಜಿನಿಯರ್ ಹುದ್ದೆ ನಿರ್ವಹಿಸುತ್ತಿದ್ದಾರೆ. ...
READ MORE