‘ಅರಳಗೋಡು’ ಕೃಷ್ಣಭಟ್ ಕಾಶಿಯವರ ರೋಚಕ ಕಾದಂಬರಿಯಾಗಿದೆ. ಕಾಡು ಕಡಿದು ಕಳ್ಳತನದಲ್ಲಿ ರವಾನಿಸುವ ಖದೀಮನಿಗೆ ಅರಣ್ಯ ಮಂತ್ರಿಯ ಪಟ್ಟ! ಗಂಧದ ತುಂಡುಗಳನ್ನು ಸಾಗಿಸುವ ದ್ರೋಹಿಗೆ ಅರಣ್ಯ ರಕ್ಷಕನ ನಾಟಕದ ಪಾತ್ರ! ಭ್ರಷ್ಟತನಕ್ಕೆ ದೊರೆಯುತ್ತಿರುವ ಮಾನ್ಯತೆಯನ್ನು ಕಂಡು ನನಗೆ ಪ್ರಜಾಪ್ರಭುತ್ವದ ಬಗೆಗೇ ಜಿಗುಪ್ಪೆ ಬರುವಂತಾಯಿತು. ನೀವು ಮಲೆನಾಡಿನ ಪ್ರಕೃತಿಯನ್ನು ಸವಿಯೋದಕ್ಕೆ ಬಂದವು. ನೋಡಿಕೊಂಡು ಮನ ತುಂಬಿಕೊಂಡು ಹೋಗಿ. ಆದ್ರೆ ಇಂತಹ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ತಾ ಹೋದ್ರೆ ನೀವು ಹಿಂತಿರುಗೋದೇ ಕಷ್ಟವಾಗ್ತದೆ. ಇಲ್ಲಿಗೆ ಬಂದವರು ಯಾರೂ ಬದುಕಿ ! ನನ್ನ ಎಡಗೈಯನ್ನು ಹಲಗೆಯ ಮೇಲಿಟ್ಟು ಮಣಿಕಟ್ಟಿಗೆ ಬಿಗಿಯಾಗಿ ಹಗ್ಗವೊಂದನ್ನು ಕಟ್ಟಿದುದನ್ನು ನೋಡಿದೆ. ಮುಂದಿನದನ್ನು ನನ್ನಿಂದ ನೋಡಲಾಗುವುದಿಲ್ಲವೆಂದು ಮುಖ ತಿರುಗಿಸುತ್ತಿದ್ದಂತೆಯೇ, ಸುತ್ತಿಗೆಯ ಏಟು ಬೆರಳಿನ ಮೇಲೆ ಬೀಳತೊಡಗಿತ್ತು. ಇದೊಂದು ಜಾತಿಯ ಮರಗಳೇ ಇಷ್ಟೊಂದು ಸಂಖ್ಯೆಯಲ್ಲಿರುವಾಗ ಇನ್ನುಳಿದವು ಎಷ್ಟಿರಲಿಕ್ಕಿಲ್ಲ? ಇಂತಹ ಸಾವಿರ ಸಾವಿರ ಮರಗಳನ್ನೇ ತುಂಬಿಕೊಂಡ ಕಾಡಿನಲ್ಲಿ ಸೌಂದರ್ಯದೊಂದಿಗೆ ಅದೆಷ್ಟು ನಿಗೂಢ ಸಂಪತ್ತು ಅಡಗಿಲ್ಲ? (ಬೆನ್ನುಡಿಯಿಂದ)
ಕೃಷ್ಣ ಭಟ್ ಕಾಶಿ ಅವರು ಮೂಲತಃ ಬಣ್ಣುಮನೆ ಎಂಬ ಸಣ್ಣ ಊರಿನವರು. ಇವರು ಈಗ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನಿವಾಸಿ. ವೃತ್ತಿಯಲ್ಲಿ LIC ಏಜೆಂಟ್ ಆಗಿದ್ದು, ಕೃಷಿಯಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಿರುವ ಇವರ ಮೊದಲ ಪುಸ್ತಕ “ಅರಳಗೋಡು” ...
READ MORE