’ಬೇಟೆ’ ಕೃತಿಯು ಶೈನಾ ಶ್ರೀನಿವಾಸ್ ಅವರ ಕಾದಂಬರಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ವಿ. ಮನೋಹರ್ ಅವರು, ಈ ಕಥೆಯ ಹೆಸರೇ ಸೂಚಿಸುವಂತೆ ಇದೊಂದು ಅಚ್ಚರಿಯ ತಿರುವುಗಳಿರುವ ಪಕ್ಕಾ ಪತ್ತೇದಾರಿ ಕಾದಂಬರಿ. ಎಲ್ಲಾ ಪತ್ತೇದಾರಿ ಕಾದಂಬರಿಗಳಲ್ಲಿ ಸಾಧಾರಣವಾಗಿ ಕಾಣಿಸುವ ಅಸಂಬದ್ಧ, ಅವಾಸ್ತವಿಕ ಹೊಡೆದಾಟಗಳು , ಅತೀ ಎನ್ನಿಸುವ ಹೀರೋಗಳ ಬಣ್ಣನೆ ಇಲ್ಲದೇ ಇರುವಂತಹ ಒಂದು ಸುಂದರ ಕಲ್ಪನೆಯ ಕತೆ. ಕರಾವಳಿಯ ಗ್ರಾಮೀಣ ಪರಿಸರದ ಸೊಬಗಿನ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಈ ಕತೆಯ ಕೌತುಕ , ಕರಾವಳಿಯ ಗ್ರಾಮೀಣ ಬದುಕಿನ ಆಚರಣೆಗಳು, ನಂಬಿಕೆ, ಪೂಜೆ ಪುನಸ್ಕಾರಗಳು ,ದೈವಗಳ ಮೇಲಿರುವ ಅಪಾರ ನಂಬಿಕೆಗಳು - ಇವೆಲ್ಲವುಗಳ ವಿವರಣೆಯ ಶೈಲಿ ಅದ್ಭುತ . ಈ ಕತೆಯ ಸಾಗುವಿಕೆ ಅದ್ಭುತ. ಏಕೆಂದರೆ ಶೈನಾರವರಿಗೆ ಮದುವೆಯಾದ ಹೆಣ್ಣು ಮಗಳ ಇತಿಮಿತಿಗಳು ಚೆನ್ನಾಗಿ ಗೊತ್ತು. ಹೀಗಾಗಿ ಅವರು ವೈಷ್ಣವಿಯ ಗೂಢಚರ್ಯೆ, ಅವಳ ಮಾನಸಿಕ ತೊಳಲಾಟವನ್ನು ನಮ್ಮ ಮನೆಯ ಮಗಳೇ ಅನುಭವಿಸುತ್ತಿದ್ದಾಳೆ ಎಂದು ನಮಗೆ ಅನ್ನಿಸುವಷ್ಟರ ಮಟ್ಟಿಗೆ ಬಿಂಬಿಸಿದ್ದಾರೆ ಎಂದಿದ್ದಾರೆ.
ಶೈನಾ ಶ್ರೀನಿವಾಸ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯವರು. ಕಲೆ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ನಾಟಕ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅನೇಕ ನಾಟಕಗಳಲ್ಲಿ ಅಭಿನಯಿಸಿ ಜನಮನ್ನಣೆಯನ್ನು ಪಡೆದಿರುತ್ತಾರೆ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ ಸಿಯನ್ನು ಪದವಿಯನ್ನು ಪಡೆದಿರುವ ಅವರು, ಬೆಂಗಳೂರಿನ ಬಿಇಎಸ್ ಶಿಕ್ಷಣ ವಿದ್ಯಾಲಯದಲ್ಲಿ ಬಿಎಡ್ ಪದವಿಯನ್ನು ಪಡೆದಿರುತ್ತಾರೆ. ಬಿಎಡ್ ಮುಗಿಯುತ್ತಿದ್ದಂತೆ ಪ್ರೌಢಶಾಲಾ ಶಿಕ್ಷಕ ಗ್ರೇಡ್-2 ವೃಂದದ ಭೌತ ವಿಜ್ಞಾನ ಶಿಕ್ಷಕಿಯಾಗಿ ಉಡುಪಿಯ ಸರ್ಕಾರಿ ಪ್ರಾಥಮಿಕ ಶಾಲೆ ಬೆಳ್ವೆಗೆ ಟಿಜಿಟಿ ಶಿಕ್ಷಕಿಯಾಗಿ ನೇಮಕಗೊಳ್ಳುತ್ತಾರೆ. ಬೆಂಗಳೂರಿಗೆ ಬಂದ ನಂತರ ಗಣಿತ ಶಾಸ್ತ್ರದಲ್ಲಿ ಎಂಎಸ್ಸಿ ...
READ MORE'ಬೇಟೆ' ಕೃತಿಯ ಕುರಿತು ಶ್ರೀಮತಿ ಶೈನಾ ಶ್ರೀನಿವಾಸ್ ಶೆಟ್ಟಿ ಅವರ ಮಾತು.