‘ಬೆಂಕಿಯ ಸುಳಿ’ ಹಾಡ್ಲಹಳ್ಳಿ ನಾಗರಾಜ್ ಅವರ ಕಾದಂಬರಿ. ಈ ಕೃತಿಗೆ ಕವಿ ಸುಬ್ಬ ಹೊಲೆಯಾರ್ ಅವರ ಬೆನ್ನುಡಿಯ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಬೆಂಕಿಯ ಸುಳಿ’ ಸುಟ್ಟರೂ ಸುಡದ ನೀರಿನ ಸುಳಿಗಿಂತಲೂ ತಣ್ಣಗೆ ಬೇಯಿಸುವಂತದ್ದು, ಮನುಷ್ಯನ ಮನಸ್ಸು ಮತ್ತು ದೇಹ ಹೊರನೋಟಕ್ಕೆ ತಿಳಿದರೂ ತಿಳಿಯುವಂತದ್ದಲ್ಲ. ಅದರ ಆಳಕ್ಕೆ ಇಳಿದು ನೋಡಬೇಕು ಅಥವಾ ಸ್ವತಃ ಅನುಭವಿಸಿದಾಗಲೆ ಅದರ ಒಳಗುಟ್ಟುಗಳು, ತಲ್ಲಣಗಳು ತಿಳಿಯುತ್ತವೆ ಎನ್ನುತ್ತಾರೆ. ಜೊತೆಗೆ ಹಾಡ್ಲಹಳ್ಳಿ ನಾಗರಾಜ್ ರವರು ಈಗಾಗಲೇ ಕನ್ನಡ ಸಾಹಿತ್ಯಲೋಕ ಗಮನಿಸಬೇಕಾದ ಗಂಭೀರ ಕಾದಂಬರಿಗಳನ್ನು, ಕಥೆಗಳನ್ನು ಕೊಟ್ಟಿದ್ದಾರೆ ಮತ್ತು ಸೃಜನಶೀಲ ಸಾಹಿತ್ಯ ಲೋಕವನ್ನು ಈ ಮೂಲಕ ವಿಸ್ತರಿಸಿದ್ದಾರೆ. ಈ ನಾಡಿನ ಬಹುಮುಖ್ಯ ಕಥೆಗಾರರು ವಿಶೇಷವಾಗಿ ಮಲೆನಾಡಿನ ಜೀವನಾಡಿಯ ಬೇರನ್ನು ಹಿಡಿದು ಬರೆದ ಲೇಖಕರು. ‘ಬೆಂಕಿಯ ಸುಳಿ’ ಹೆಣ್ಣೊಬ್ಬಳ ಬೇಕು ಬೇಡಗಳನ್ನು ಪೂರೈಸಲಾಗದ ಗಂಡೊಬ್ಬನ ಅಸಾಹಯಕತೆಯನ್ನು ಹೆಣ್ಣೊಬ್ಬಳ ಬೇಕು ಬೇಡಗಳನ್ನು ಪೂರೈಸಲಾಗದ ಗಂಡೊಬ್ಬನ ಅಸಾಹಯಕತೆಯನ್ನು ಹೇಳಿಕೊಳ್ಳಲಾಗದೆ ಬದುಕಲೇಬೇಕಾದ ಅನಿವಾರ್ಯತೆಯನ್ನು ಮತ್ತು ಅದರಾಚೆಗೆ ದಾಟುವ ಮನುಷ್ಯ ಸಂಬಂಧದ ಸೂಕ್ಷ್ಮ ಎಳೆಗಳನ್ನು ಬಿಡಿಸಿ ಮುಖಾಮುಖಿಯಾಗಿಸುವ ಕಥೆಯ ಹಂದರವೇ ಈ ಕೃತಿಯ ವೈಶಿಷ್ಟ್ಯಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಹಾಡ್ಲಹಳ್ಳಿ ನಾಗರಾಜು ಅವರು ಮೂಲತಃ ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ ಗ್ರಾಮದವರು. ತಂದೆ- ಗುರುಶಾಂತೇಗೌಡರು, ತಾಯಿ- ಪುಟ್ಟಮ್ಮ. ಕಡುಬಡತನದ ರೈತಾಪಿ ಕುಟುಂಬದಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾಪತ್ರಕ್ಕೆ ಪಾತ್ರರಾಗಿದ್ದಾರೆ. ಎನ್.ಸಿ.ಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಂತರ ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಹಾಸನ ನಗರ ಸಮೀಪ ಅತ್ತಿಹಳ್ಳಿ ಎಂಬ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ ನಾಗರಾಜು ಅವರು ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪುಮೂಡಿಸಿದ್ದಾರೆ. ...
READ MORE