ಹೆಚ್.ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ಮನ ಹಿಗ್ಗಿ ಹೂವಾಯ್ತು. ಈ ಕಾದಂಬರಿ ನಾಯಕಿ ಸಾವಿತ್ರಿ ತನ್ನ ಶ್ರಮ,ದುಡಿಮೆ,ಬುದ್ಧಿಶಕ್ತಿಯೊಂದಿಗೆ ಬದುಕು ಸ್ಥಾಪಿಸಿಕೊಂಡು,ತನ್ನ ಅಕ್ಕಂದಿರ ಬದುಕಿಗೂ ಬೆಳಕು ನೀಡುತ್ತಾಳೆ.ಈ ಕಾದಂಬರಿಯಲ್ಲಿ ನೂರೆಂಟು ದಿವ್ಯ ತಿರುಪತಿಗಳ ಪೈಕಿ,ಮೊದಲಿನ ಹದಿನಾರು ಪವಿತ್ರ ಕ್ಷೇತ್ರಗಳ ಬಗ್ಗೆ ಪ್ರಾಸಂಗಿಕವಾಗಿ ಪರಿಚಯ ನೀಡಲಾಗಿದೆ. ಕಡುಬಡತನದ ಸಂಸಾರ ನಾರಾಯಣರಾವ್ ಹಾಗೂ ಪದ್ದಮ್ಮರವರಿಗೆ ಸಾಲಾಗಿ ಮೂವರು ಪುತ್ರಿಯರು.ಮೊದಲಿನವರಿಬ್ಬರಿಗೆ ಹೋಲಿಸಿದರೆ,ಮೂರನೆಯವಳಾದ ಸಾವಿತ್ರಿ ತೆಳ್ಳಗೆ,ಬೆಳ್ಳಗೆ ಲಕ್ಷಣವಾಗಿದ್ದಳು.ಓದಿನಲ್ಲೂ ಮುಂದುವರೆದು ಪದವಿ ಮುಗಿಸಿ ಕುಟುಂಬದ ಉನ್ನತಿಗಾಗಿ ಕೆಲಸ ಹಿಡಿಯಲು ಕೋಲಾರದಿಂದ ತುಮಕೂರಿಗೆ ಪ್ರಯಾಣ ಬೆಳೆಸುವಳು.ಸಾಧನ ಇನ್ ಸ್ಟ್ಯೂ ಟ್ನಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುವಳು.ಕೆಲಸ ಸಿಕ್ಕ ಆರು ತಿಂಗಳಲ್ಲೇ ತನ್ನನು ಪ್ರೇಮಿಸಿ ಬಂದ ಅನುಕೂಲಸ್ತರ ಮನೆಹುಡುಗ ಚಂದ್ರುವನ್ನು ,ತನ್ನ ಅಕ್ಕಂದಿರ ಬದುಕನ್ನು ಸ್ಥಾಪಿಸಲೋಸುಗ ಮದುವೆಯಾಗಲು ನಿರಾಕರಿಸುವಳು.ತನ್ನ ಅಕ್ಕಂದಿರಾದ ಪಾರ್ವತಿ,ವಿಶಾಲಾಕ್ಷಿಯರ ಮದುವೆಗೆ ಹಣ ಜೋಡಿಸಿ,ಮದುವೆಯೂ ಮಾಡುವಳು.ನಂತರ ತನ್ನ ನ್ನು ಮೆಚ್ಚಿದ ಯುವ ಅಧಿಕಾರಿಯನ್ನು ತನ್ನ ತಂದೆ-ತಾಯಿಗಳನ್ನೂ ನೋಡಿಕೊಳ್ಳ ಬೇಕೆಂಬ ಷರತ್ತಿನೊಂದಿಗೆ ನೆಲೆ ಕಂಡುಕೊಳ್ಳುವಳು.ಐದಾರು ವರುಷಗಳ ನಂತರ ರಾಯರ ಅನುಗ್ರಹದಿಂದ ವಂಶೋದ್ಧಾರಕನನ್ನೂ ಪಡೆಯುವಳು.ತಾನಂದುಕೊಂಡಂತೆ ಬದುಕನ್ನು ಕಟ್ಟಿಕೊಂಡ ಅವಳ" ಮನ ಹಿಗ್ಗಿ ಹೂವಾಯ್ತು!"
ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...
READ MORE